RNI NO. KARKAN/2006/27779|Wednesday, February 18, 2026
You are here: Home » breaking news » ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಕೊರೋನಾ ಸೋಂಕಿತರಿಗೆ ಆಸರೆಯಾಗಿದ್ದಾರೆ : ಡಾ‌. ಡಾ.ಶಿವಾನಂದ ಮಾಸ್ತಿಹೋಳಿ

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಕೊರೋನಾ ಸೋಂಕಿತರಿಗೆ ಆಸರೆಯಾಗಿದ್ದಾರೆ : ಡಾ‌. ಡಾ.ಶಿವಾನಂದ ಮಾಸ್ತಿಹೋಳಿ 

ಶಾಸಕ ಸತೀಶ ಜಾರಕಿಹೊಳಿ ಕೊರೋನಾ ಸೋಂಕಿತರಿಗೆ ಆಸರೆಯಾಗಿದ್ದಾರೆ : ಡಾ‌. ಡಾ.ಶಿವಾನಂದ ಮಾಸ್ತಿಹೋಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 2 :

 
ಶಾಸಕರ ಅನುದಾನದಡಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕೃತಕ ಆಕ್ಸಿಜನ ಉತ್ಪಾದನಾ ಯಂತ್ರ ನೀಡಿ ಕೊರೋನಾ ಸೋಂಕಿತರಿಗೆ ಆಸರೆಯಾಗಿದ್ದಾರೆ ಎಂದು ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೋಳಿ ಹೇಳಿದರು

ಬುಧವಾರದಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಶಾಸಕ ಸತೀಶ ಅವರಿಂದ ಆಕ್ಸಿಜನ ಯಂತ್ರಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕೊರೋನಾ ಲಕ್ಷಣಗಳನ್ನು ಹೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ಸೋಂಕಿತರಿಗೆ ಈ ಯಂತ್ರ ಸಂಜೀವಿನಿಯಾಗಿ ಕಾರ್ಯಮಾಡುತ್ತದೆ. ಕೃತಕ ಆಕ್ಸಿಜನ ಯಂತ್ರವು ಗಾಳಿಯಿಂದ ಆಕ್ಸಿಜನ ತಯಾರಿ ಮಾಡಿಕೊಂಡು ಸೋಂಕಿತರಿಗೆ ಆಕ್ಸಜನ ಪೂರೈಸುತ್ತದೆ ಹೀಗೆ ಪೂರೈಕೆಯಾಗುವ ಆಕ್ಸಿಜನನಿಂದ ಕೊರೋನಾ ಸೋಂಕಿತರು ಪ್ರಾಥಮಿಕ ಹಂತದಲ್ಲಿಯೇ ಚೇತರಿಕೆ ಕಾಣುತ್ತಾರೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ , ಹುಕ್ಕೇರಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಉದಯ ಕುಡಚಿ , ಡಾ.ರವೀಂದ್ರ ಅಂಟಿನ ಇದ್ದರು.

Related posts: