RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಹಗಲು ದರೋಡೆಗೆ ಇಳಿದಿರುವ ಟ್ರೇಡರ್ಸ ಹಾಗೂ ಕಿರಾಣಿ, ಜನರಲ್ ಸ್ಟೋರಗಳು: ಕ್ಯಾರೆಯನ್ನದ ಅಧಿಕಾರಿಗಳು

ಗೋಕಾಕ:ಹಗಲು ದರೋಡೆಗೆ ಇಳಿದಿರುವ ಟ್ರೇಡರ್ಸ ಹಾಗೂ ಕಿರಾಣಿ, ಜನರಲ್ ಸ್ಟೋರಗಳು: ಕ್ಯಾರೆಯನ್ನದ ಅಧಿಕಾರಿಗಳು 

ಹಗಲು ದರೋಡೆಗೆ ಇಳಿದಿರುವ ಟ್ರೇಡರ್ಸ ಹಾಗೂ ಕಿರಾಣಿ, ಜನರಲ್ ಸ್ಟೋರಗಳು: ಕ್ಯಾರೆಯನ್ನದ ಅಧಿಕಾರಿಗಳು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 29 :

 

ಜನತಾ ಕರ್ಪ್ಯೂ ಹೆಸರಿನಲ್ಲಿ ಹಗಲು ದರೋಡೆಗೆ ಇಳಿದಿರುವ ನಗರದ ಹೋಲಸೇಲ್ ವ್ಯಾಪಾರಸ್ಥರು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಇದನ್ನು ತಡೆಯುವ ಮಹತ್ತರ ಜವಾಬ್ದಾರಿ ಹೊತ್ತಿರುವ ತಾಲೂಕಾ ಟಾಸ್ಕ್ ಪೋರ್ಸ ಅಧಿಕಾರಿಗಳು ಬರೀ ಪೋಸ್ ನೀಡುತ್ತಾ ಸರಕಾರದ ಆದೇಶವನ್ನು ಮೈಕನಲ್ಲಿ ಬೋಗಳುತ್ತಾ ತಿರುಗಾಡುತ್ತಿದ್ದಾರೆ.

ಸರಕಾರ ನೈಟ್ ಕರ್ಪ್ಯೂ ಜಾರಿ ಮಾಡಿದ ಡೇ ಒಂದರಿಂದಲೂ ಸಹ ತಾಲೂಕಾ ಟಾಸ್ಕ ಪೋರ್ಸ ಅಧಿಕಾರಿಗಳ ತಂಡದಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಪರವಾಗಿ ನಿಂತು ಅವರಿಗೆ ಧೈರ್ಯ ತುಂಬಬೇಕಾದ ಅಧಿಕಾರಿ ವರ್ಗದವರು ಬರೀ ಪೋಸ್ ಕೊಡುತ್ತಾ ತಿರುಗಾಡುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇದರ ಪರಿಣಾಮ ಎಂಬಂತೆ ನಮ್ಮನ್ನು ಹೇಳುವವರಿಲ್ಲ , ಕೇಳುವವರು ಯಾರಿಲ್ಲಾ, ನಾವು ಮಾಡಿದ್ದೆ ಕಾನೂನು , ನಾವು ಎಷ್ಟು ಬೇಕಾದಷ್ಟು ಹಣಕ್ಕೆ ಏನಾದರೂ ಮಾರಾಟ ಮಾಡಬಹುದು ಎಂದು ತಿಳಿದು ಗೋಕಾಕ ಕಿರಾಣಿ ವ್ಯಾಪಾರಸ್ಥರು ಮತ್ತು ಜನರ್ ಸ್ಟೋರ್ಸ ಮತ್ತು ಟ್ರೇಡರ್ಸ ಗಳ ಮಾಲಿಕರು ಅಗತ್ಯ ವಸ್ತುಗಳ ಬೆಲೆಗಳನ್ನು ತಮಗೆ ತಿಳಿದಷ್ಟು ಮಟ್ಟಕ್ಕೆ ಬೆಲೆ ಏರಿಕೆ ಮಾಡಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.

ನಗರದ ಬೊಂಗಾಳೆ ಜನರಲ್ ಸ್ಟೋರ್, ಅಂಬಿಕಾ ಜನರಲ್ ಸ್ಟೋರ್, ರಾಮದೇವ ಜನರಲ್ ಸ್ಟೋರ, ಶಕ್ತಿ ಟ್ರೇಡರ್ಸ , ಧನಲಕ್ಷ್ಮೀ ಕಿರಾಣಿ ಸ್ಟೋರ್, ಬಿಳ್ಳೂರ ಟೀ ಡಿಪೋ , ಕರ್ನಾಟಕ ಪಾನ ಮಸಾಲ ಸ್ಟೋರ , “ಮಹಾಲಕ್ಷ್ಮಿ ಕಿರಾಣಿ ಸ್ಟೋರ್”, ಸಾಗರ ಸ್ಟೇಷನರಿ, ವಿಷ್ಣು ಟ್ರೇಡರ್ಸ , ಮಾಂಗವಿ ಎಂಟರ್ಪ್ರೈಸಸ್, ಧನಲಕ್ಷ್ಮೀ ಸ್ಟೇಷನರಿ ಸೇರಿದಂತೆ ಇತರ ಬೀಡಾ ಸಿಗರೇಟ್ ,ಗುಟ್ಕಾ ಸಗಟು ವ್ಯಾಪಾರಸ್ಥರು ಪಾನಶಾಫ್ ವ್ಯಾಪಾರಸ್ಥರಿಂದ ಸಿಕ್ಕಾಪಟ್ಟೆ ಹಣ ಸುಲಿಗೆ ಮಾಡುತ್ತಿದ್ದಾರೆ.
ಸ್ಟಾರ್ ಒಂದು ಬಾಕ್ಸಗೆ ಮೊದಲು 110 ರೂ ಇತ್ತು ಅದನ್ನು ಪಾನಶಾಫ್ ನವರು ಒಂದು ಸ್ಟಾರ್ 5 ರೂ ಕ್ಕೆ ಮಾರಾಟ ಮಾಡುತ್ತಿದ್ದರು. ಆದರೆ ಜನತಾ ಕರ್ಪ್ಯೂ ಘೋಷಣೆಯಾದ ಮೇಲೆ ಹೋಲಸೇಲ್ ವ್ಯಾಪಾರಸ್ಥರು ತಮ್ಮ ಹತ್ತಿರ ದಾಸ್ತಾನು ಇದ್ದರು ಸಹ ಚಿಲ್ಲರೆ ವ್ಯಾಪಾರಸ್ಥರಿಂದ ಒಂದು ಬಾಕ್ಸ ಸ್ಟಾರ್ ಗೆ 190 ಪಡೆಯುತ್ತಿದ್ದಾರೆ ಇದರಿಂದ ಪಾನಶಾಫ್ ಅಂಗಡಿಕಾರರು ಅನಿವಾರ್ಯವಾಗಿ ಒಂದು ಸ್ಟಾರ್ ಗೆ ಸಾರ್ವಜನಿಕರಿಂದ 8 ರೂ ಪಡೆಯುತ್ತಿದ್ದಾರೆ. ವಿಮಲ್ ಒಂದು ಬಾಕ್ಸಗೆ 114 ರೂ ಇದ್ದರೆ ಈ ಮಹಾಶಯರು ಒಂದು ಬಾಕ್ಸಗೆ 190 ರೂ ಅಂತೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಸಹ ಪಾನಶಾಫ್ ಅಂಗಡಿಕಾರರು ಒಂದಕ್ಕೆ 8 ರೂ ರಂತೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಬಹುಮುಖ್ಯವಾಗಿ ಚಿಕ್ಕ ಆರ್.ಎಂ.ಡಿ ಒಂದು ಬಾಕ್ಸಗೆ ಮೊದಲು 650 ರೂ ಗೆ ಮಾರಾಟ ಮಾಡುತ್ತಿದ್ದರು ಆದರೆ ಜನತಾ ಕರ್ಪ್ಯೂ ನೆಪಮಾಡಿ ಈ ಹೋಲಸೇಲ್ ಮಾರಾಟಗಾರರು ಚಿಕ್ಕ ಆರ್.ಎಂ.ಡಿ ಒಂದು ಬಾಕ್ಸಗೆ 1250 ರೂ ಹಾಗೂ ದೊಡ್ಡ ಆರ್.ಎಂ.ಡಿ ಒಂದು ಬಾಕ್ಸಗೆ 1350 ರೂ ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮೊದಲು ಒಂದು ಚಿಕ್ಕ ಆರ್.ಎಂ.ಡಿ 12 ರೂ ಹಾಗೂ ದೊಡ್ಡ ಆರ್.ಎಂ.ಡಿ 15 ರೂ ಗೆ ಮಾರಾಟ ಮಾಡುತ್ತಿದ್ದರು. ಆದರೆ ಜನತಾ ಕರ್ಪ್ಯೂ ನ ಲಾಭ ಪಡೆಯಲು ಸಂಚು ರೂಪಿಸಿರುವ ಗೋಕಾಕ ನಗರದ ಈ ಕಳ್ಳ ವ್ಯಾಪಾರಸ್ಥರು ಇದರ ಬೆಲೆ ಗಗನಕ್ಕೆ ಏರಿಸಿದ್ದಾರೆ . ಕಳ್ಳ ವ್ಯಾಪಾರಸ್ಥರು ಹೇಳಿದಷ್ಟು ಹಣ ಕೊಟ್ಟು ಖರೀದಿ ಮಾಡುವ ಪಾನಶಾಫ್ ಅಂಗಡಿಕಾರರು ಒಂದು ಚಿಕ್ಕ ಆರ್.ಎಂ.ಡಿ 18 ರೂ ಹಾಗೂ ದೊಡ್ಡ ಆರ್‌.ಎಂ.ಡಿ ಗೆ 25 ರೂ ರಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗುಟ್ಕಾ ಜಗಿಯುವ ಬಡವರಾಗಲಿ, ಶ್ರೀಮಂತರಾಗಲಿ ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ. ಮೊದಲೆ ಲಾಕಡೌನ ನಿಂದ ಕಂಗಾಲಾಗಿರುವ ಜನರು ಈ ಹಗಲು ದರೋಡೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಲು ಗೋಕಾಕ ಡಿ.ವಾಯ್.ಎಸ್.ಪಿ ಜಾವೇದ ಹಾಗೂ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಅವರ ಗಮನಕ್ಕೆ ವಿಷಯ ತಂದರೂ ಸಹ ಈ ಮಹಾಶಯರು ಅದು ನಮ್ಮ ಕರ್ತವ್ಯವಲ್ಲ ಎಂಬಂತೆ ವರ್ತಿಸಿ ಗೊಡ್ಡು ಪೋಸ್ ಕೊಡುವಲ್ಲಿ ನಿರತರಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಸುತ್ತಿದೆ.

ಇದು ಸ್ಟಾರ್, ವಿಮಲ್, ಆರ್.ಎಂ.ಡಿ ಕಥೆಯಾದರೆ ಇನ್ನೂ ದಿನಸಿ ವಸ್ತುಗಳ ಬೆಲೆಯೂ ಸಹ ಕಿರಾಣಿ ವ್ಯಾಪಾರಸ್ಥರು ಗಗನಕ್ಕೆ ಏರಿಸಿದ್ದಾರೆ. ಖಾಯಂ ಆಗಿ ಅವರುಗಳ ಅಂಗಡಿಗಳಲ್ಲಿಯೇ ವಸ್ತುಗಳನ್ನು ಖರೀದಿ ಮಾಡುವವರಿಗೆ ಒಂದು ರೇಟ್ ಮತ್ತು ಉಳಿದವರಿಗೆ ಒಂದು ರೇಟ್ ಹೇಳಿ ಮಾರಾಟ ಮಾಡುತ್ತಿದ್ದಾರೆ.

ಪಾಪ ಜನರು ಅಗತ್ಯ ವಸ್ತುಗಳು ಸಿಗದಿದ್ದರೆ ಏನು ಗತಿ ಎಂದು ಭಾವಿಸಿ ಕಿರಾಣಿ ವ್ಯಾಪಾರಸ್ಥರು ಹೇಳಿದ ಬೆಲೆಗೆ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಸರಕಾರ ಮತ್ತು ಸ್ಥಳೀಯ ಟಾಸ್ಕ ಪೋರ್ಸ ತಂಡದ ಅಧಿಕಾರಿಗಳಿಗೆ ಹಿಡಿಶಾಪ್ ಹಾಕುತ್ತಿದ್ದಾರೆ.
ರಾಜ್ಯ ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಇರುವಾಗ ಸಾರ್ವಜನಿಕರ ಪರವಾಗಿ ಕಾರ್ಯ ಮಾಡಬೇಕಾಗಿದ್ದ ಅಧಿಕಾರಿಗಳು ಇದು ನಮಗೆ ಸಂಬಂಧವಿಲ್ಲ ಎಂಬಂತೆ ಕಾರ್ಯನಿರ್ವಹಿಸುತ್ತಿರುವುದು ಇವರ ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ.
ಈಗಲಾದರೂ ಸ್ವಯಂ ಪ್ರೇರಣೆಯಿಂದ ಇಲ್ಲಿನ ಅಧಿಕಾರಿಗಳು ಎಚ್ಚೆತ್ತು ಕೊಂಡು ನಗರದಾದ್ಯಂತ ಸಂಚರಿಸಿ ಬೇಕಾಬಿಟ್ಟಿ ಹಣ ಪಡೆದು ಗುಟ್ಕಾ , ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರ ಅಂಗಡಿಗಳ ಮೇಲೆ ದಾಳಿ ಮಾಡಿ ವ್ಯಾಪಾರಸ್ಥರು ದಾಸ್ತಾನು ಮಾಡಿರುವ ವಸ್ತುಗಳನ್ನು ವಶಕ್ಕೆ ಪಡೆಯುವ ಧೈರ್ಯ ತೊರಬೇಕೆಂದು ಇಲ್ಲಿನ ಸಾರ್ವಜನಿಕರ ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಸರಕು ಸಾಗಾಣಿಕೆಗೆ ಅವಕಾಶ ಇದ್ದರು ನಗರದ ಹೋಲಸೇಲ್ ವ್ಯಾಪಾರಸ್ಥರು ಹೆಚ್ಚಿನ ಹಣ ಪಡೆದು ಮಾರಾಟಕ್ಕೆ ಇಳಿದಿರುವ ಕ್ರಮ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸಾರ್ವಜನಿಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ವ್ಯಾಪಾರಸ್ಥರು ವ್ಯವಹರಿಸಿದರೆ ಅವರಿಗೆ ಒಂದಿಷ್ಟು ಶೋಭೆ ಬರುತ್ತದೆ. ಅಂತಹ ವಿಶಾಲ ಮನಸ್ಸನ್ನು ಹೊಂದು ಬುದ್ದಿಯನ್ನು ನಗರದ ವ್ಯಾಪಾರಸ್ಥರಿಗೆ ದೇವರು ದಯಪಾಲಿಸಲಿ ಎಂದು ಬೇಡಿಕೊಳೋಣ.

Related posts: