ಗೋಕಾಕ:ರಹೆಮಾನ ಪೌಂಡೇಶನ್ ವತಿಯಿಂದ ನಿರ್ಗತಿಕರಿಗೆ ಊಟ ಹಾಗೂ ಹೊದಿಕೆ ವಿತರಣೆ
ರಹೆಮಾನ ಪೌಂಡೇಶನ್ ವತಿಯಿಂದ ನಿರ್ಗತಿಕರಿಗೆ ಊಟ ಹಾಗೂ ಹೊದಿಕೆ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 18 :
ತಾಲೂಕಿನ ಕೊಣ್ಣೂರ ಗ್ರಾಮದ ರಹೆಮಾನ ಪೌಂಡೇಶನ್ ಘಟಕದಿಂದ ಮಂಗಳವಾರದಂದು ನಗರದಲ್ಲಿಯ ನಿರ್ಗತಿಕರಿಗೆ ಅನ್ನಸಂತರ್ಪಣೆ ಹಾಗೂ (ಬ್ಲ್ಯಾಂಕೆಟ್ ) ಹೊದಿಕೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪೌಂಡೇಶನ್ ಮುಖ್ಯಸ್ಥ ಮೌಲಾನಾ ಅಬಿದುಲ್ಲಾ ಕೊರೋನಾ ಸಂದರ್ಭದಲ್ಲಿ ಬಡ ಜೀವಗಳು ಜೀವನ ನಡೆಸುವುದು ಕಷ್ಟವಾಗಿದ್ದು, ಅವರ ಸಂಕಷ್ಟದಲ್ಲಿ ಪಾಲುದಾರರಾಗಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಮಹತ್ತರ ಉದ್ದೇಶದಿಂದ ರಹೆಮಾನ ಪೌಂಡೇಶನ್ ವತಿಯಿಂದ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಊಟ ಹಾಗೂ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ನೀಡಲಾಗುತ್ತಿದ್ದು, ನಮ್ಮ ಈ ಯೋಜನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಹಾಗೂ ಇನ್ನೀತರ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದು ಅವರಿಗೂ ಸಹ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಪೌಂಡೇಶನ್ ನ ಹಾಜಿ ಸಲ್ಲಿಂ ಅಮ್ಮಣಗಿ, ಪರವೇಜ ನಾಯಿಕ, ಇಮ್ತಿಯಾಜ ಪೀರಜಾದೆ, ಮುನ್ನಾ ಸೌದಾಗರ, ಹಿದಾಯತ ಬಾಗವಾನ, ಸಾಜೀದ ನಧಾಫ, ನಜೀರ ಕಾಜಿ ಸೇರಿದಂತೆ ಇತರರು ಇದ್ದರು.