RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ : ಪ್ರಾಚಾರ್ಯ ಎ.ವಾಯ್.ಹಾದಿಮನಿ

ಗೋಕಾಕ:ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ : ಪ್ರಾಚಾರ್ಯ ಎ.ವಾಯ್.ಹಾದಿಮನಿ 

ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ : ಪ್ರಾಚಾರ್ಯ ಎ.ವಾಯ್.ಹಾದಿಮನಿ

ಗೋಕಾಕ ಸೆ 12: ವಿದ್ಯಾರ್ಥಿ ಜೀವನ ತಪಸ್ಸಿನ ಜೀವನ, ಕಠಿಣ ಪರಿಶ್ರಮದಿಂದ ಅದನ್ನು ಸಿದ್ದಿಸಿಕೊಂಡು ಸಾಧಕರಾಗುವಂತೆ ಇಲ್ಲಿಯ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ಹೇಳಿದರು.

ಇತ್ತಿಚೆಗೆ ನಗರದ ಆರ್.ಎಲ್.ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದ ಸಾಸ್ಕøಂತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮಾದರಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸ್ವಾವಲಂಭನೆಯ ಬದುಕಿ ದೇಶದ ಶಕ್ತಿಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಶೋಕ ಲಗಮಪ್ಪಗೋಳ ವಹಿಸಿದ್ದರು.
ವೇದಿಕೆ ಮೇಲೆ ಕೆಪಿಸಿಸಿ ಎಸ್‍ಸಿ/ಎಸ್‍ಟಿ ಘಟಕದ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಲಗಮಪ್ಪಗೋಳ, ಸಂಸ್ಥೆಯ ಕಾರ್ಯದರ್ಶಿ ಕೆಂಪಣ್ಣ ಶಿಂಗಳಾಪೂರ, ಆಡಳಿತಾಧಿಕಾರಿ ವಿಲ್ಸನ್ ಖಾನಟ್ಟಿ, ಪ್ರಾಚಾರ್ಯ ಡಾ|| ಆರ್.ವೈ. ಮಾಳಗಿ ಇದ್ದರು.

ಪಿ.ಜಿ.ತಿಗಡಿ ಸ್ವಾಗತಿಸಿದರು, ಎಸ್.ವಿ.ಬಾರಕಿ ನಿರೂಪಿಸಿದರು, ವಿ.ವಿ.ಮಡ್ಡೆನ್ನವರ ವಂದಿಸಿದರು.

Related posts: