RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ನಗರಸಭೆ ಉಪಚುನಾವಣೆ : ಅಭಿಷೇಕ ದಳವಾಯಿ, ಬಾಬು ಮುಳಗುಂದಗೆ ಒಲಿದ ಅದೃಷ್ಟ

ಗೋಕಾಕ:ನಗರಸಭೆ ಉಪಚುನಾವಣೆ : ಅಭಿಷೇಕ ದಳವಾಯಿ, ಬಾಬು ಮುಳಗುಂದಗೆ ಒಲಿದ ಅದೃಷ್ಟ 

ನಗರಸಭೆ ಉಪಚುನಾವಣೆ : ಅಭಿಷೇಕ ದಳವಾಯಿ, ಬಾಬು ಮುಳಗುಂದಗೆ ಒಲಿದ ಅದೃಷ್ಟ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 31 :

 
ಭಾರಿ ಕುತೂಹಲ ಕೆರಳಿಸಿದ್ದ ಗೋಕಾಕ ನಗರಸಭೆ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್ ಸಂಖ್ಯೆ 13 ರಲ್ಲಿ ಅಭ್ಯರ್ಥಿ ಅಭಿಷೇಕ ದಳವಾಯಿ ಮತ್ತು ವಾರ್ಡ ಸಂಖ್ಯೆ 26ರಲ್ಲಿ ಅಭ್ಯರ್ಥಿ ಬಾಬು ಮುಳಗುಂದ ಜಯ ಸಾಧಿಸಿದ್ದಾರೆ.

ಮಾರ್ಚ 29 ರಂದು ಜರುಗಿದ್ದ ಉಪಚುನಾವಣೆಯಲ್ಲಿ ವಾರ್ಡ ಸಂಖ್ಯೆ 13 ರಲ್ಲಿ ಒಟ್ಟು 6 ಜನ ಅಭ್ಯರ್ಥಿಗಳು ಸ್ವರ್ಧಿಸಿದ್ದರೆ ವಾರ್ಡ ಸಂಖ್ಯೆ 26 ರಲ್ಲಿ ಇಬ್ಬರು ಅಭ್ಯರ್ಥಿಗಳು ಸ್ವರ್ಧಿಸಿದ್ದರು.

ವಾರ್ಡ ಸಂಖ್ಯೆ 13 ರ ಪಕ್ಷೇತರ ಅಭ್ಯರ್ಥಿ ಅಭಿಷೇಕ ದಳವಾಯಿ 65 ಮತಗಳಿಂದ ಮತ್ತು ವಾರ್ಡ ಸಂಖ್ಯೆ 26 ರ ಪಕ್ಷೇತರ ಅಭ್ಯರ್ಥಿ ಬಾಬು ಮುಳಗುಂದ ಅವರು ಕೇವಲ 5 ಮತಗಳ ಅಂತರದಿಂದ ಜಯಗಳಿಸುವ ಮೂಲಕ ನಗರಸಭೆ ಎಂಟ್ರಿ ಕೊಟ್ಟಿದ್ದಾರೆ.

Related posts: