RNI NO. KARKAN/2006/27779|Saturday, July 27, 2024
You are here: Home » breaking news » ಗೋಕಾಕ:ನಿರಂತರ ಸುರಿಯುತ್ತಿರುವ ಮಳೆ, ನಗರಕ್ಕೆ ನುಗ್ಗಿದ ನೀರು : ಗಂಜಿ ಕೇಂದ್ರದ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ನಿರಾಶ್ರಿತರು

ಗೋಕಾಕ:ನಿರಂತರ ಸುರಿಯುತ್ತಿರುವ ಮಳೆ, ನಗರಕ್ಕೆ ನುಗ್ಗಿದ ನೀರು : ಗಂಜಿ ಕೇಂದ್ರದ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ನಿರಾಶ್ರಿತರು 

ನಿರಂತರ ಸುರಿಯುತ್ತಿರುವ ಮಳೆ, ನಗರಕ್ಕೆ ನುಗ್ಗಿದ ನೀರು : ಗಂಜಿ ಕೇಂದ್ರದ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ನಿರಾಶ್ರಿತರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 12:


ಮಲೆನಾಡಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಘಟಪ್ರಭಾ , ಮಾರ್ಕೆಂಡೆಯ ಹಾಗೂ ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಗೋಕಾಕ ನಗರದ ಹಳೆ ದನದ ಪೇಠೆ ನೀರು ನುಗ್ಗಿದ್ದು, ರಸ್ತೆ ಸಂಪೂರ್ಣ ಬಂದದಾಗಿದೆ. ನಗರದ ಲೋಳಸೂರ ಸೇತುವೆ ಮುಳುಗಡೆ ಒಂದೆರೆಡು ಪೂಟ್ ಬಾಕಿಯಿದೆ. ಹೊರ ಹರಿಯು ಹೀಗೆ ಮುಂದುವರೆದರೆ ಇಂದು ರಾತ್ರಿ ಲೋಳಸೂರ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗಂಜಿ ಕೇಂದ್ರದ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ನಿರಾಶ್ರಿತರು : ಸತತ ಮಳೆಯಿಂದಾಗಿ ಗೋಕಾಕ ನಗರಕ್ಕೆ ನೀರು ನುಗ್ಗಿದ ಪರಿಣಾಮ ನಗರದ ಹಳೆ ದನದ ಪೇಠೆ, ದಾಳಂಬ್ರಿ ತೋಟದಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ತಮ್ಮ ಅಗತ್ಯ ವಸ್ತುಗಳನ್ನು ತಗೆದುಕೊಂಡು ತಮ್ಮ ಸಂಬಂಧಿಕರ , ಆಪ್ತರ , ನೆಂಟರ ಮನೆಗಳಿಗೆ ತೆರುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿರಾಶ್ರಿತರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕಾಗಿದ್ಧ, ತಾಲೂಕು ಆಡಳಿತ ನಗರಕ್ಕೆ ನೀರು ನುಗ್ಗಿದರು ಸಹ ಇನ್ನೂವರೆಗೆ ಕಾಳಜಿ ಕೇಂದ್ರಗಳನ್ನು ತೆರದಿಲ್ಲ ಇದರಿಂದ ಹಳೆ ದನದ ಪೇಠೆಯಲ್ಲಿ , ದಾಳಂಬ್ರಿ ತೋಟದಲ್ಲಿ ವಾ‌ಸಿಸುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನೀರು ಹೆಚ್ಚಾಗುತ್ತಿದ್ದು ಮಹಡಿ ಮೇಲೆ ನಿಂತಿರುವ ಮಹಿಳೆಯರು,ಘಟಪ್ರಭಾ ನದಿ ನೀರಿನಿಂದ ಗೋಕಾಕ ಜನರಲ್ಲಿ ಆತಂಕ, ಸಧ್ಯ 56 ಸಾವಿರ ಕ್ಯೂಸೇಕ್ ನಷ್ಟಿರಿಯವ ಘಟಪ್ರಭೆಯ ಒಳಹರಿವು,ಸಂಜೆ ಮತ್ತೆ ನೀರು ಹೆಚ್ಚು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರಿಂದ ದನದ ಪೇಟೆ ಓಣಿಯ ನೂರಾರು ಕುಟುಂಬಗಳು ಆತಂಕದಲ್ಲಿದ್ದಾರೆ.

ಬರೀ ಮುನ್ನೆಚ್ಚರಿಕೆ ನೀಡಿ ಜಾಗಾ ಖಾಲಿ ಮಾಡಿ ಅಂದ ನಗರಸಭೆ ಅಧಿಕಾರಿ : ನಿರಾಶ್ರಿತರಿಗೆ ಅಧಿಕೃತವಾಗಿ ಯಾವುದೇ ವ್ಯವಸ್ಥೆ ಮಾಡದೆ, ಬರೀ ಮೈಕ್ ತಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದು ಹೇಳಿದರೆ ಎಲ್ಲಿ ಹೋಗಬೇಕು, ನಮಗ ಕಾಳಜಿ ಕೇಂದ್ರ ಮಾಡಿದ್ರ ಸಾಲ್ಯಾಗ ಜಾಗಾ ಕೊಟ್ರ ಹೊಕ್ಕವ್ರಿ ಎಂದು ನಿರಾಶ್ರಿತರು ಅಳಲು ತೋಡಿಕೊಳ್ಳುತ್ತಿದ್ದಾರೆ.

Related posts: