ಗೋಕಾಕ:ದಿನೇಶ ಕಲ್ಲಹಳ್ಳಿಯ ಅಣುಕು ಶವಯಾತ್ರೆ ಮಾಡಿ ಶಾಸಕ ರಮೇಶ ಅಭಿಮಾನಿಗಳ ಆಕ್ರೋಶ, ಸಿಎಂಗೆ ಮನವಿ
ದಿನೇಶ ಕಲ್ಲಹಳ್ಳಿಯ ಅಣುಕು ಶವಯಾತ್ರೆ ಮಾಡಿ ಶಾಸಕ ರಮೇಶ ಅಭಿಮಾನಿಗಳ ಆಕ್ರೋಶ, ಸಿಎಂಗೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 6 :
ಶಾಸಕ ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣವನ್ನು ಸಿಓಡಿ ಅಥವಾ ಸಿಐಡಿ ತನಿಖೆ ಒಳ ಪಡಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ನಕಲಿ ಸಿ.ಡಿ ಬಿಡುಗಡೆ ಮಾಡಿರುವ ದಿನೇಶ ಕಲ್ಲಹಳ್ಳಿ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಶಾಸಕ ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು ಶನಿವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮಿನಿ ವಿಧಾನಸೌಧ ಅವರಿಗೆ ಬೃಹತ್ ಪ್ರತಿಭಟನೆ ಮಾಡಿ , ದಿನೇಶ ಕಲ್ಲಹಳ್ಳಿ ಯ ಅಣುಕು ಶವಯಾತ್ರೆ ಮಾಡಿದರು. ನಗರದ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಯಿಸಿ ನಂತರ ತಹಶೀಲ್ದಾರ ಕಛೇರಿಗೆ ತೆರಳಿ ಸುಮಾರು 2 ಘಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಯಿಸಿ ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಮಾಜಿ ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಏಳ್ಗೆ ಹಾಗೂ ಜನಪ್ರಿಯತೆಯನ್ನು ಸಹಿಸಲಾಗದೆ ಅವರ ಚಾರಿತ್ರ್ಯಕ್ಕೆ ಕಳಂಕ ತರುವ ಉದ್ದೇಶದಿಂದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶ ಪೂರ್ವಕವಾಗಿ ಕೆಲ ವಿರೋಧ ಪಕ್ಷದವರ ಕೂಡಿಕೊಂಡು ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಿಬಿಐ ಹಾಗೂ ಸಿಓಡಿ ತನಿಖೆ ಮಾಡಿಸಿ ಪ್ರಕರಣದ ಹಿಂದಿನ ಸತ್ಯವನ್ನು ಬಹಿರಂಗ ಪಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಜಯಾನಂದ ಹುಣ್ಣಚ್ಯಾಳಿ , ಭೀಮಶಿ ಭರಮನ್ನರವ , ಅಬ್ಬಾಸ ಎ ದೇಸಾಯಿ, ಅಶೋಕ ಪಾಟೀಲ, ಪರಶುರಾಮ ಭಗತ್ , ಶಾಮಾನಂದ ಪೂಜೇರಿ, ಮಹಾಂತೇಶ ತಾಂವಶಿ, ಬಸವರಾಜ ಆರೆನ್ನವರ , ಕುತುಬುದ್ದೀನ ಗೋಕಾಕ, ತಳದಪ್ಪ ಅಮ್ಮಣಗಿ, ಶ್ರೀದೇವಿ ತಡಕೋಡ, ಶಫೀ ಜಮಾದಾರ, ರಾಜೇಶ್ವರಿ ವಡೆಯರ , ಕುಸುಮಾ ಖನಗಾಂವಿ, ಜ್ಯೋತಿ ಕೊಲಾರ, ಬಸವರಾಜ ಸಾಯನ್ನವರ, ಬಸವರಾಜ ದೇಶನೂರ, ಲಕ್ಷ್ಮಣ ಖಡಕಬಾಂವಿ, ಅನಿಲ ತುರಾಯಿದಾರ, ಬಸವರಾಜ ಹಿರೇಮಠ, ಜ್ಯೋತಿಭಾ ಸುಭಂಜಿ, ಕೆ.ಡಿ.ಕಲಾಲ , ಚಿದಾನಂದ ದೇಮಶೆಟ್ಟಿ, ಸಂತೋಷ ಹುಂಡೇಕರ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು