ಗೋಕಾಕ:ನಿಯೋಜಿತ ಶ್ರೀ ಭಗೀರಥ ಶಾಖಾ ಪೀಠದ ಭೂಮಿ ಪೂಜೆ

ನಿಯೋಜಿತ ಶ್ರೀ ಭಗೀರಥ ಶಾಖಾ ಪೀಠದ ಭೂಮಿ ಪೂಜೆ
ಗೋಕಾಕ ಮೇ 30 : ರಾಜ್ಯ ಉಪ್ಪಾರ ಸಮುದಾಯಕ್ಕೆ ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗದ ಮಧುರೈನಲ್ಲಿ ಶ್ರೀ ಭಗೀರಥ ಗುರು ಪೀಠ ಹೊಂದಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಉಪ್ಪಾರ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರೀ ಭಗೀರಥ ವಿಭಾಗೀಯ ಶಾಖಾ ಪೀಠ ತೆರೆಯಲಾಗುತ್ತಿದೆ ಎಂದು ಶ್ರೀ ಭಗೀರಥ ಗುರು ಪೀಠದ ಜಗದ್ಗುರು ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.
ಅವರು, ಶುಕ್ರವಾರದಂದು ಮಾಲದಿನ್ನಿ ಕ್ರಾಸ್ ರಸ್ತೆಯಲ್ಲಿ ನಿಯೋಜಿತ ಶ್ರೀ ಭಗೀರಥ ಶಾಖಾ ಪೀಠದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಭಗೀರಥ ಉಪ್ಪಾರ ವಿಭಾಗೀಯ ಶಾಕಾ ಪೀಠದಲ್ಲಿ ಶ್ರೀ ಭಗೀರಥ ದೇವಸ್ಥಾನ, ಶ್ರೀ ಗುರು ಮಂದಿರ, ಶ್ರೀ ಗುರು ಭವನ, ಸಭಾ ಭವನ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬರುವ ದಿನಗಳಲ್ಲಿ ಶಾಲೆ, ಕಾಲೇಜುಗಳನ್ನು ತೆರೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು.
ಸಮಯದ ಅಭಾವದ ಹಿನ್ನಲೆ ಭೂಮಿ ಪೂಜೆಯನ್ನು ಇಂದು ನೆರವೇರಿಸಲಾಗಿದೆ. ಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಉಪ್ಪಾರ ಸಮಾಜದ ಎಲ್ಲ ಮುಖಂಡರು ಹಾಗೂ ಜನಪ್ರತಿನಿಧಗಳನ್ನು ಸಭೆ ಕರೇದು ಶ್ರೀ ಭಗೀರಥ ಶಾಕಾ ಪೀಠ ನಿರ್ಮಾಣಕ್ಕೆ ವಂತಿಗೆ ಪಡೆಯಲಾಗುವದು. ಎಲ್ಲರೂ ಈ ಶಾಕಾ ಗುರು ಪೀಠದ ಕಟ್ಟಡ ನಿರ್ಮಾಣ ಧರ್ಮ ಕಾರ್ಯಕ್ಕೆ ತನು ಮನ ಧನದಿಂದ ಸಹಾಯಕ ಸಹಕಾರ ನೀಡುವಂತೆ ಮನವಿ ಮಾಡಿದರು.
ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಉಪ್ಪಾರ ಸಮಾಜದ ಹಿರಿಯರು, ರಾಜಕೀಯ ಧುರೀಣರು, ಸಮಾಜ ಬಾಂಧವರು ಉಪಸ್ಥಿತರಿದ್ದರು.