ಘಟಪ್ರಭಾ:ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಗುಂಡು ಹಾರಿಸಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಕೊಲೆ : ಘಟಪ್ರಭಾ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೆ 1 :
ಇಲ್ಲಿಗೆ ಸಮೀಪದ ರಾಜಾಪೂರ ಗ್ರಾಮದಲ್ಲಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯನ ಮೇಲೆ ಗುಂಡು ಹಾರಿಸಿ ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ.
ರಾಜಾಪೂರ ಗ್ರಾಮದ ನಿವಾಸಿ ಚಿಂತಾಮಣಿ ರಾಮಪ್ಪ ಮೇಟಿ (55) ಕೊಲೆಯಾದ ವ್ಯಕ್ತಿ. ಬಹಳ ದಿನಗಳಿಂದ ನಡೆಯುತ್ತಿದ್ದ ಹೋಲದ ಸೀಮೆ ವಿವಾದಕ್ಕೆ ಸಂಬಂದಪಟ್ಟಂತೆ ಇವರ ಕಕ್ಕನ ಮಗನಾದ ಗೋಪಾಲ ಭೀಮಪ್ಪ ಮೇಟಿ (35) ಇತನು ಬಂದೂಕಿನಿಂದ ಗುಂಟು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅರೋಪಿಯು ಪರಾರಿಯಾಗಿದ್ದು ಘಟಪ್ರಭಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.