ಘಟಪ್ರಭಾ:ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ
ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ
ಘಟಪ್ರಭಾ ಸೆ 10: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಹಜರತ ಬಾಬಾಪೀರ ಮಿಠ್ಠೇಶಾವಲಿ ಉರುಸ ನಿಮಿತ್ಯ ದಿ.11 ಮತ್ತು 12ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ದಿ.11ರಂದು ಉರುಸ ಸಂದಲ್ ಶರೀಫ್ ಸಂಜೆ 4ಗಂಟೆಗೆ ಗ್ರಾಮದ ಫನಿಬಂದ ಸಮಾಜ ಹಾಗೂ ಗ್ರಾಮದ ಸಮಸ್ತ ಹಿಂದೂ ಮುಸ್ಲಿಂ ಬಾಂಧವರಿಂದ ಗಂಧ ಏರಿಸುವುದು. ರಾತ್ರಿ 10.30ಕ್ಕೆ ಶ್ರೀ ಹಜರತ ಬಾಬಾಪೀರ ಮಿಠ್ಠೇಶಾವಲಿ ಉರುಸ ನಿಮಿತ್ಯ ಶ್ರೀ ಬಾಬಾಪೀರ ಮಿಠ್ಠೇಶಾವಲಿ ನಾಟ್ಯ ಸಂಘ ನೇತ್ರತ್ವದಲ್ಲಿ ಶ್ರೀ ಬಸವೇಶ್ವರ ನಾಟ್ಯ ಸಂಘ ಮೆಳವಂಕಿ ಇವರಿಂದ ದುಡ್ಡು ದಾರಿ ಬಿಡಿಸಿತು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ದಿ.12 ರಂದು ರಾತ್ರಿ 10ಕ್ಕೆ ತುರಸಾ ತುರುಸಿನ ಗಜಲ್ ಕವಾಲಿ ಜರುಗಲಿದೆ. ನಂತರ ವಿವಿಧ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಸಾಂಸ್ಕಂತಿಕ ಕಾರ್ಯಕ್ರಮದ ಸಾನಿಧ್ಯವನ್ನು ಶಾನವಾಜ ಉರ್ಫ್ ಮೊಹಬತ್ ಶಹಾ ಎಂ.ಮಕಾನದಾರ ಬಾನವಾಪೀಠ ವಹಿಸಲಿದ್ದು, ಗಂಗಯ್ಯ ಸ್ವಾಮಿಗಳು, ಸಿದ್ದಯ್ಯಸ್ವಾಮಿ ಹಿರೇಮಠ ನೇತ್ರತ್ವ ವಹಿಸುವರು. ಸಾಂಸ್ಕಂತಿಕ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ, ಅಂಬಿರಾವ್ ಪಾಟೀಲ, ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಮೀನಾಕ್ಷಿ ಜೋಡಟ್ಟಿ, ಚಿದಾನಂದ ಡೂಗನವರ, ಕಾಡಪ್ಪ ಬಡಿಗೇರ, ಶಂಕರ ಹುಣಶ್ಯಾಳಿ, ಸಲೀಮ ಮುಜಾವರ, ಸುಧೀರ ಜೋಡಟ್ಟಿ ಉಪಸ್ಥಿತರಿರುವರು ಎಂದು ಉರುಸ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.