RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಅಧ್ಯಕ್ಷೆಯಾಗಿ ರೇಣುಕಾ ಪಾಟೀಲ, ಉಪಾಧ್ಯಕ್ಷರಾಗಿ ಭೀಮಪ್ಪ ಬಿರನಾಳಿ ಅವಿರೋಧ ಆಯ್ಕೆ

ಘಟಪ್ರಭಾ:ಅಧ್ಯಕ್ಷೆಯಾಗಿ ರೇಣುಕಾ ಪಾಟೀಲ, ಉಪಾಧ್ಯಕ್ಷರಾಗಿ ಭೀಮಪ್ಪ ಬಿರನಾಳಿ ಅವಿರೋಧ ಆಯ್ಕೆ 

ಅಧ್ಯಕ್ಷೆಯಾಗಿ ರೇಣುಕಾ ಪಾಟೀಲ, ಉಪಾಧ್ಯಕ್ಷರಾಗಿ ಭೀಮಪ್ಪ ಬಿರನಾಳಿ ಅವಿರೋಧ ಆಯ್ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಫೆ 4 :

 
ಸಮೀಪದ ಶಿಂದಿಕುರಬೇಟ ಗ್ರಾಮ ಪಂಚಾಯತಗೆ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಈರಪ್ಪ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ಯಲ್ಲಪ್ಪ ಬಿರನಾಳಿ ಅವಿರೋಧವಾಗಿ ಆಯ್ಕೆಯಾದರು.
ಗುರುವಾರದಂದು ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೆ ನಾಮಪತ್ರ ಸಲ್ಲಿಸಿದ್ದರಿಂದ ಈ ಅವಿರೋಧ ಆಯ್ಕೆ ಜರುಗಿತೆಂದು ಚುನಾವಣಾಧಿಕಾರಿ ಐ.ಎಂ.ದಪೇದಾರ ಅವರು ತಿಳಿಸಿದರು.
ಈ ಆಯ್ಕೆಯು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರ ನೇತ್ರತ್ವದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಸಚಿವರ ಕಾರ್ಯಾಲಯದ ಆಪ್ತ ಸಹಾಯಕರಾದ ಸುರೇಶ ಸನದಿ, ಮಾಜಿ ಜಿ.ಪಂ ಸದಸ್ಯ ಸುಧೀರ ಜೋಡಟ್ಟಿ, ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ, ಗ್ರಾ.ಪಂ ಪಿಡಿಒ ಸಾಯೀಶ್ವರಿ ಮೆಣಸಿನಕಾಯಿ,ಗ್ರಾಮದ ಮುಖಂಡರು ಸೇರಿದಂತೆ ಗ್ರಾಮ ಪಂಚಾಯತ ಸರ್ವ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Related posts: