ಗೋಕಾಕ:ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಆನಿ ಸಂಕಲ್ಪ ವಿವಾದಿತ ಪುಸ್ತಕದ ಮುಖಪುಟ ಸುಟ್ಟು ಕರವೇ ಆಕ್ರೋಶ
ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಆನಿ ಸಂಕಲ್ಪ ವಿವಾದಿತ ಪುಸ್ತಕದ ಮುಖಪುಟ ಸುಟ್ಟು ಕರವೇ ಆಕ್ರೋಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :
ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದ್ದರು ಸಹ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸರಕಾರ ಪದೇ ಪದೇ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದು ಕರವೇ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು
ಬುಧವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಮಹಾರಾಷ್ಟ್ರ ಸರಕಾರ ಹೊರ ತರುತ್ತಿರುವ ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಆನಿ ಸಂಕಲ್ಪ ವಿವಾದಿತ ಪುಸ್ತಕದ ಮುಖಪುಟವನ್ನು ಸುಟ್ಟು ಮಹಾ ಸರಕಾರದ ವಿರುದ್ಧ ಪ್ರತಿಭಟನೆ ನಡೆಯಿಸಿ ಅವರು ಮಾತನಾಡಿದರು
ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಷಿಕರ ಮಧ್ಯೆ ಭಾಷಾಬಾಂಧವ್ಯದಲ್ಲಿ ಹುಳಿಹಿಂಡುವಂತಹ ಕಾರ್ಯವಾಗಿದ್ದು, ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಪುಸ್ತಕವನ್ನು ಮುಟಗೋಲು ಹಾಕಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಒಬ್ಬ ಐಎಎಸ್ ಹುದ್ದೆಯ ವಿಶೇಷ ಕರ್ತವ್ಯಾಧಿಕಾರಿಯನ್ನು ನೇಮಿಸಿ ಗಡಿ ವಿಷಯಕ್ಟೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಸರಕಾರದ ಅಧೀನದಲ್ಲಿರುವ ಗಡಿ ಪ್ರಾಧಿಕಾರವು ಸಹ ಬೆಳಗಾವಿ ಗಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗಬೇಕೆಂದು ಬಸವರಾಜ ಖಾನಪ್ಪನವರ ಆಗ್ರಹಿಸಿದರು
ಈ ಸಂದರ್ಭದಲ್ಲಿ ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಮುಗುಟ ಪೈಲ್ವಾನ್ , ರಮೇಶ ಕಮತಿ , ಶೆಟ್ಟೆಪ್ಪಾ ಗಾಡಿವಡ್ಡರ , ಮಹಾದೇವ ಮಕ್ಕಳಗೇರಿ , ಕಿರಣ ತೊಗರಿ , ಅಶೋಕ ಬಂಡಿವಡ್ಡರ , ಬಸು ಗಾಡಿವಡ್ಡರ , ರಾಮ ಕುಡೆಮ್ಮಿ , ಶೆಟ್ಟೆಪ್ಪಾ ಡಬಾಜ , ರಾಮ ಕೊಂಗನ್ನೊಳ್ಳಿ , ಈರಪ್ಪಾ ಕೋಳಿ , ಬಸು ತೇಲಿ , ನಾಗರಾಜ ಬಂಡಿವಡ್ಡರ , ದುರ್ಗಪ್ಪಾ ಬಂಡಿವಡ್ಡರ , ಗಣಪತಿ ಜಾಗನೂರ , ಮಾಳಪ್ಪಾ ಮಾಳೇದರ , ಮಾಳಪ್ಪಾ ಹಣಜಿ , ಹಣಮಂತ ಕಮತಿ , ವಿಠ್ಠಲ ನಾಯಿಕ , ಆನಂದ ಬಿರಡಿ , ಹಣಮಂತ ಅಮ್ಮಣಗಿ ಮೌನೇಶ ಲೋಣಾರೀ ಇದ್ದರು.