RNI NO. KARKAN/2006/27779|Tuesday, May 21, 2024
You are here: Home » breaking news » ಘಟಪ್ರಭಾ:ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆ.ಎಚ್.ಆಯ್. ಆಸ್ಪತ್ರೆಯ ಆವರಣದಲ್ಲಿ ಜಾಗಾ ನೀಡುವಂತೆ ಮನವಿ

ಘಟಪ್ರಭಾ:ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆ.ಎಚ್.ಆಯ್. ಆಸ್ಪತ್ರೆಯ ಆವರಣದಲ್ಲಿ ಜಾಗಾ ನೀಡುವಂತೆ ಮನವಿ 

ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆ.ಎಚ್.ಆಯ್. ಆಸ್ಪತ್ರೆಯ ಆವರಣದಲ್ಲಿ ಜಾಗಾ ನೀಡುವಂತೆ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಡಿ 11 :

 

ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಿ ಮತ್ತು ಧುಪದಾಳ ಗ್ರಾಮ ಪಂಚಾಯತಿಯನ್ನು ವಿಲೀನಗೊಳಿಸಿ ಘಟಪ್ರಭಾ ಪುರಸಭೆಯಾಗಿ ಮೆಲ್ದರ್ಜೆಗೆ ಏರಿಸಿದ್ದರಿಂದ ಕಾರ್ಯಾಲಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆ.ಎಚ್.ಆಯ್. ಆಸ್ಪತ್ರೆಯ ಆವರಣದಲ್ಲಿ ಜಾಗಾ ನೀಡುವಂತೆ ಕೆ.ಎಚ್.ಆಯ್.ವೈದ್ಯಾಧಿಕಾರಿ ಡಾ. ಘನಶ್ಯಾಮ ವೈದ್ಯರಿಗೆ ಘಟಪ್ರಭಾ ಸಾರ್ವಜನಕರು ಗುರುವಾರದಂದು ಮನವಿ ಸಲ್ಲಿಸಲಾಯಿತು.
ಜನಸಂಪನ್ಮೂಲ ಹಾಗೂ ಬೆಳಗಾವಿ ಇಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರ ಅಧಿಕಾರ ಅವದಿಯಲ್ಲಿ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯತಿ ಹಾಗೂ ಧುಪದಾಳ ಗ್ರಾಮ ಪಂಚಾಯತಿಯನ್ನು ಕೊಡಿಸಿ ಘಟಪ್ರಭಾ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ ಹಿನ್ನಲೆಯಲ್ಲಿ ಘಟಪ್ರಭಾ ಪುರಸಭೆಗೆ ನೂತನ ಕಟ್ಟಡ ಕಟ್ಟಲು ಮಲ್ಲಾಪೂರ ಹಾಗೂ ಧುಪದಾಳ ಗ್ರಾಮಗಳಲ್ಲಿ ಮುಖ್ಯ ರಸ್ತೆಗೆ ಹೊಂದಿ ಸಾಕಷ್ಟು ಸ್ಥಳಾವಕಾಶ ಇಲ್ಲದ ಕಾರಣ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಸುಮಾರು 30 ಗುಂಟೆ ಜಾಗೆ ನೀಡಬೇಕೆಂದು ಡಾ. ಘನಶ್ಯಾಮ ವ್ಯದ್ಯರಿಗೆ ಮನವಿ ಸಲ್ಲಿಸಿಲಾಯಿತು. ಡಾ. ಘನಶ್ಯಾಮ ವೈದ್ಯರು ಆಸ್ಪತ್ರೆಯ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸಿ ನಂತರ ತಿಳಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿಹಿರಿಯರಾದ ಡಿ.ಎಮ್.ದಳವಾಯಿ, ಈಶ್ವರ ಮಟಗಾರ, ಮಹಾದೇವ ದೇಶಪಾಂಡೆ sಸತ್ತೆಪ್ಪ ಬೆನವಾಡೆ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಕುಮಾರ ಹುಕ್ಕೇರಿ, ಸುರೇಶ ಪೂಜೇರಿ, ಸುರೇಶ ಕಾಡದವರ, ತಾ.ಪಂ. ಸದಸ್ಯರಾದ ಲಗಮನ್ನಾ ನಾಗನ್ನವರ, ಮಹೇಶ ಪಾಟೀಲ, ಶೇಖರ ರಜಪೂತ, ಕೆಂಪಣ್ಣಾ ಚೌಕಶಿ, ನಾಗರಾಜ ಜಂಬ್ರಿ, ಪ.ಪಂ. ಉಪಾದ್ಯಕ್ಷ ಈರಣ್ಣಾ ಕಲಕುಟಗಿ, ಸದಸ್ಯರಾದ ಸಲೀಮ ಕಬ್ಬೂರ, ಮಾರುತಿ ಹುಕ್ಕೇರಿ, ಮಲ್ಲು ಕೋಳಿ, ಇಮ್ರಾನ ಬಟಕುರ್ಕಿ, ಪ್ರವೀನ ಮಟಗಾರ, ನಾಗರಾಜ ಚಚಡಿ, ವಿಕ್ರಮ ದಳವಾಯಿ, ಪ. ಪಂ. ಅಧಿಕಾರಿ ಕೆ.ಟಿ.ಪಾಟೀಲ. ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಗ್ರಾಮ ಸೇರಿದಂತೆ ಅನೇಕರು ಇದ್ದರು.

Related posts: