RNI NO. KARKAN/2006/27779|Tuesday, December 3, 2024
You are here: Home » breaking news » ಗೋಕಾಕ:ಕೂಡಲೇ ಗೋಕಾಕ ಜಿಲ್ಲೆಯನ್ನಾಗಿಸಲು ಸರಕಾರ ಕ್ರಮ ಜರುಗಿಸಲ್ಲಿ : ಅಶೋಕಾ ಪೂಜಾರಿ ಆಗ್ರಹ

ಗೋಕಾಕ:ಕೂಡಲೇ ಗೋಕಾಕ ಜಿಲ್ಲೆಯನ್ನಾಗಿಸಲು ಸರಕಾರ ಕ್ರಮ ಜರುಗಿಸಲ್ಲಿ : ಅಶೋಕಾ ಪೂಜಾರಿ ಆಗ್ರಹ 

ಕೂಡಲೇ ಗೋಕಾಕ ಜಿಲ್ಲೆಯನ್ನಾಗಿಸಲು ಸರಕಾರ ಕ್ರಮ ಜರುಗಿಸಲ್ಲಿ : ಅಶೋಕಾ ಪೂಜಾರಿ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 21:

 

ಸರಕಾರವೇ ನೇಮಿಸಿದ ಆಯೋಗಗಳ ವರದಿಯನ್ನಾದರಿಸಿ ಸುಮಾರು ವರ್ಷಗಳ ಗೋಕಾಕ ಜಿಲ್ಲಾ ರಚನೆಯ ಹೋರಾಟಗಳ ಮನವಿಗೆ ಸ್ಪಂಧಿಸಿ ರಚನೆಯಾದ ಗೋಕಾಕ ಜಿಲ್ಲೆಯನ್ನು ರಾಜಕೀಯ ಕಾರಣಗಳಿಂದ ಅಸ್ಥಿತ್ವಕ್ಕೆ ತರಲು ಅಂದಿನ ಸರಕಾರ ಹಿಂದೇಟು ಹಾಕಿದ್ದು, ಆದರೆ ಬದಲಾದ ಸನ್ನಿವೇಶದಲ್ಲಿ ಇಂದಿನ ಸರಕಾರ ಕೂಡಲೇ ಗೋಕಾಕ ಜಿಲ್ಲಾ ರಚನೆಯ ಆದೇಶವನ್ನು ಕೂಡಲೇ ಘೋಷಿಸಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಸರಕಾವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು ಸರಕಾರ ನೇಮಿಸಿದ ಯಾವುದೇ ಆಯೋಗಗಳು ಶಿಪಾರಸ್ಸು ಮಾಡದೇ ಇದ್ದರೂ ಸಹ ಕೇವಲ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಹೊಸ ಜಿಲ್ಲೆಗಳ ಅಸ್ಥಿತ್ವ ಬರುತ್ತಿವೆ. ಇದಕ್ಕೆ ಅಲ್ಲಿಯ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಒತ್ತಡವೇ ಕಾರಣವಾಗಿದೆ. ಆದರೆ ಗೋಕಾಕ ಜಿಲ್ಲಾ ರಚನೆಯ ಹೋರಾಟ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಬ್ರಿಟಿಷರ ಆಡಳಿತ ಅವಧಿಯಲ್ಲಿಯೇ ಗೋಕಾಕ ಜಿಲ್ಲೆಯ ನಮೂದು ಈ ಹಿಂದಿನ ಸರಕಾರಿ ದಾಖಲೆಗಳಲ್ಲಿ ಇದೆ. ಈಗಾಗಲೇ ಗೋಕಾಕ ಜಿಲ್ಲಾ ರಚನೆಯ ವಾಸ್ತವತೆಯನ್ನು ಅರಿತ ಸರಕಾರವೇ ನೇಮಿಸಿದ ಆಯೋಗಗಳು ಮಾಡಿದ ಶಿಪಾರಸ್ಸುಗಳಿಗೆ ಪೂರಕವಾಗಿಯೇ ಹಿಂದಿನ ಜೆ.ಎಚ್. ಪಟೇಲ್ ರವರ ನೇತೃತ್ವದ ಸರಕಾರ ಗೋಕಾಕ ಜಿಲ್ಲಾ ರಚನೆಯ ಆದೇಶ ಮಾಡಿತ್ತು. ಆದರೆ ಪ್ರಭಲ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸದರೀ ಆದೇಶವನ್ನು ಸ್ಥಗೀತಗೊಳಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಆದರೆ ಗೋಕಾಕ ಜಿಲ್ಲಾ ರಚನೆಯ ಹೋರಾಟ ಈ ಭಾಗದ ಜನರ ಅಭಿವೃದ್ಧಿಪರ ಕನಸಾಗಿದೆ. ಇದಕ್ಕೆ ಪೂರಕವಾದ ಹೋರಾಟವನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ಜಿಲ್ಲಾ ರಚನೆಯ ಪ್ರಕ್ರಿಯೆಯನ್ನು ಜಾರಿಗೆಗೊಳಿಸುವದು ಈ ಭಾಗದ ಚುನಾಯಿತ ಶಾಸಕರು ಮತ್ತು ಸಚಿವರ ನೈತಿಕ ಹೊಣೆಗಾರಿಕೆಯಾಗಿದೆ. ಅದರೆ ಸರಕಾರದ ಮೇಲೆ ಈ ಕುರಿತು ಒತ್ತಡ ತರುವದು ಮಾತ್ರ ಹೋರಾಟಗಾರರ ಕರ್ತವ್ಯ. ರಾಜಕೀಯ ಇಚ್ಚಾಶಕ್ತಿಯಿಂದ ಹೊಸ ಜಿಲ್ಲೆಯನ್ನು ಅಸ್ಥಿತ್ವಗೊಳಿಸಲು ಸಾಧ್ಯ ಎಂಬ ವಾಸ್ತವ ಸತ್ಯವನ್ನು ಹೊಸಪೇಟೆಯ ಶಾಸಕ ಹಾಗೂ ಸಚಿವ ಆನಂದ್‍ಸಿಂಗ ತೋರಿಸಿಕೊಟ್ಟಿದ್ದಾರೆ. ಈಗಲೂ ಸಹ ನಾವು ರಾಜಕೀಯವಾಗಿ ಪ್ರಭಲರಿದ್ದೇವೆ ಎಂದು ಹೇಳುತ್ತಿರುವ ನಮ್ಮ ಚುನಾಯಿತ ಪ್ರತಿನಿಧಿಗಳು ಗೋಕಾಕ ಜಿಲ್ಲಾ ರಚನೆಯ ವಿಷಯದಲ್ಲಿ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಇಲ್ಲಿಯ ಜನತೆ ಕಾದು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗೋಕಾಕ ಜಿಲ್ಲಾ ರಚನೆಯ ಹೋರಾಟ ಚುನಾಯಿತ ಪ್ರತಿನಿಧಿಗಳ ಮನಸ್ಥಿತಿಗೆ ಪೂರಕವಾಗಿ ಇರದೇ ಜಿಲ್ಲಾ ರಚನೆಯ ದೃಢಸಂಕಲ್ಪಕ್ಕೆ ಪೂರಕವಾಗಿ ಇರಬೇಕೆಂದು ಹೋರಾಟಗಾರರಲ್ಲಿ ಮನವಿ ಮಾಡಿದ್ದಾರೆ.

Related posts: