ಗೋಕಾಕ:ಬಿದ್ದವರನ್ನು ಮೇಲೆತ್ತುವುದೆ ಶುದ್ಧ ಮಾನವ ಧರ್ಮ : ಮಗದುಮ್ಮ
ಬಿದ್ದವರನ್ನು ಮೇಲೆತ್ತುವುದೆ ಶುದ್ಧ ಮಾನವ ಧರ್ಮ : ಮಗದುಮ್ಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 12 :
ಬಿದ್ದವರನ್ನು ಮೇಲೆತ್ತುವುದೆ ಶುದ್ಧ ಮಾನವ ಧರ್ಮ ಆ ಕಾರ್ಯ ಇಲ್ಲಿನ ಶಿವಾ ಪೌಂಡೇಶನ್ ಮಾಡುತ್ತಿರುವುದು ಶ್ಲಾಘನೀಯ ಎಂದು ಸೋಮಶೇಖರ್ ಮಗದುಮ್ಮ ಹೇಳಿದರು.
ಗುರುವಾರದಂದು ನಗರದ ಶಿವಾ ಪೌಂಡೇಶನ್ ಕಾರ್ಯಾಲಯದಲ್ಲಿ ಶಿವಾ ಪೌಂಡೇಶನ್ ಹಾಗೂ ಸ್ನೇಹಾ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
900 ವರ್ಷಗಳ ಹಿಂದೆ ತ್ರಿವಿಧ ದಾಸೋಹದ ಕಲ್ಪನೆ ನೀಡಿದ ಶಿವ ಶರಣ ಮಾರ್ಗದರ್ಶನದಂತೆ ಜನರಿಗೆ ಅನುಕೂಲ ಕಾರ್ಯಮಾಡಲು ಮುಂದೆ ಬಂದು ಅನಾಥ ಮಕ್ಕಳಿಗೆ ಬಾಳು ಕಲ್ಪಿಸುವ ಕಾರ್ಯಮಾಡುತ್ತಿರುವುದು ಶಿವಾ ಪೌಂಡೇಶನ್ ಇತರರಿಗೆ ಮಾದರಿಯಾಗಿದೆ. ಇವರ ಕಾರ್ಯ ಹೀಗೆ ಮುಂದವರೆಯಲ್ಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಂಸ್ಥೆಯ ವಿಷ್ಣು ಲಾತೂರ ವಹಿಸಿದ್ದರು.
ಕಲ್ಮೇಶ ಕಬ್ಬೂರ ಸ್ವಾಗತಿಸಿದರು, ಶಿವಾ ಪೌಂಡೇಶನ್ ಉಪಾಧ್ಯಕ್ಷ ವೆಂಕಟೇಶ್ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಾಮಸಿದ್ದ ಲಾಡಿ ನಿರೂಪಿಸಿದರು , ಶಾನೂರ ಪೀರೆವಾಡಿ ವಂದಿಸಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಬೆಲ್ಲದ, ನಗರಸಭೆ ಸದಸ್ಯ ಶ್ರೀಶೈಲ ಯಕ್ಕುಂಡಿ,ಡಾ. ಪಿಯೂಷ ಪಾಠಕ್, ಶಿವಾ ಪೌಂಡೇಶನ್ ಅಧ್ಯಕ್ಷ ರಮೇಶ ಪೂಜೇರಿ, ಸಂತೋಷ ಖಂಡ್ರಿ, ಯಲ್ಲಪ್ಪ ಹುಲಕುಂದ ಇದ್ದರು .