ಗೋಕಾಕ:ಜಲಪ್ರವಾಹದಿಂದ ಹಾನಿಗೊಳದ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಪರಿಶೀಲಿಸಿದ ಮಾಜಿ ಸಚಿವ ಸತೀಶ

ಜಲಪ್ರವಾಹದಿಂದ ಹಾನಿಗೊಳದ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಪರಿಶೀಲಿಸಿದ ಮಾಜಿ ಸಚಿವ ಸತೀಶ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಅ 17 :
ನಗರದ ಜಲಪ್ರವಾಹದಿಂದ ಹಾನಿಗೊಳದ ಪ್ರದೇಶಗಳಲ್ಲಿ ಸತೀಶ ಶುಗರ್ಸ್ ಲಿ. ವತಿಯಿಂದ ಕೈಗೊಂಡಿರುವ ಸ್ವಚ್ಚತಾ ಕಾರ್ಯಗಳನ್ನು ಮಾಜಿ ಸಚಿವ ಕಾರಖಾನೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಪರಿಶೀಲಿಸಿದರು.
ನಗರದ ಕಿಲ್ಲಾದಲ್ಲಿ ಕೈಗೊಂಡಿರುವ ಸ್ವಚ್ಚತಾ ಕಾರ್ಯವನ್ನು ಪರಿಶೀಲಿಸಲು ಬಂದಿದ್ದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಬ್ರಾಹ್ಮಣ ಸಮಾಜ ಭಾಂಧವರು ರಾಘವೇಂದ್ರ ಮಠದಲ್ಲಿ ಸತ್ಕರಿಸಿ ಗೌರವಿಸಿದರು
ಇದೇ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಚಂದ್ರಶೇಖರ ಕೊಣ್ಣೂರ ಅವರು ಸತೀಶ ಜಾರಕಿಹೊಳಿ ಫೌಂಡೇಶನ್ ಗೆ 2 ಲಕ್ಷ ರೂ (ಚಕ್ಕ್ ) ದೇಣಿಗೆಯನ್ನು ಸತೀಶ ಜಾರಕಿಹೊಳಿ ಅವರಿಗೆ ನೀಡಿದರು.
ಕಳೆದ ನಾಲ್ಕು ದಿನಗಳಿಂದ ಸತೀಶ ಶುಗರ್ಸ ಕಾರಖಾನೆಯ ಸಿಬ್ಬಂದಿಗಳು ಹಾಗೂ ಸತೀಶ ಜಾರಕಿಹೊಳಿ ಫೌಂಡೇಶನ್ ನ ಕಾರ್ಯಕರ್ತರು ಕಿಲ್ಲಾ ,ಉಪ್ಪಾರ ಓಣಿ , ಪುಂಡಿಕೇರಿ ಓಣಿ , ವಡ್ಡರ ಓಣಿ, ಕುಂಬಾರ ಓಣಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಬಿದ್ದ ಮನೆಗಳಲ್ಲಿಯ ಮಣ್ಣು, ರಸ್ತೆಯಲ್ಲಿ ಬಿದ್ದ ತ್ಯಾಜ್ಯ ತೆರುವುಗೋಳಿಸವ ಕಾರ್ಯವನ್ನು ಮಾಡಿ ನಿರಾಶ್ರಿತರಿಗೆ ಸಹಕಾರ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರಮೋದ ಜೋಶಿ ,ಸದಾನಂದ ಯಾರ್ದಿ, ಹಣಮಂತ ದೇಶಪಾಂಡೆ, ಮೋಹನ ದೇಶಪಾಂಡೆ, ನಟರಾಜ್ ಮಹಾಜನ,ಬಾಬು ಹುದ್ದಾರ,ಪವನ ಜೋಶಿ,ರಿಯಾಜ ಚೌಗಲಾ, ಶಿವು ಪಾಟೀಲ, ಆರೀಫ ಪೀರಜಾದೆ, ಶಂಕರ ಗಿಡನ್ನವರ, ಪಾಂಡು ಮನ್ನೀಕೇರಿ ಸೇರಿದಂತೆ ಇತರರು ಇದ್ದರು