RNI NO. KARKAN/2006/27779|Thursday, July 31, 2025
You are here: Home » breaking news » ಬನವಾಸಿ:ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ: ಸಚಿವ ಹೆಬ್ಬಾರ್

ಬನವಾಸಿ:ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ: ಸಚಿವ ಹೆಬ್ಬಾರ್ 

ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ: ಸಚಿವ ಹೆಬ್ಬಾರ್
ನಮ್ಮ ಬೆಳಗಾವಿ ಇ – ವಾರ್ತೆ , ಬನವಾಸಿ ಅ 31:


ಕಾರ್ಯಕರ್ತರ ಶಕ್ತಿ ಇಲ್ಲದಿದ್ದರೆ ಯಾರು ನಾಯಕರಾಗಲು ಸಾಧ್ಯವಿಲ್ಲ. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಭಿನ್ನಾಭಿಪ್ರಾಯ ಮರೆತು ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೆಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಗಮನ ಸೆಳೆದಿರುವ ಏರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಗೆಲುವು ಸಾಧಿಸಲಿದೆ. ಮುಂದಿನ ದಿನಗಳು ನಮಗೆಲ್ಲರಿಗೂ ಜವಾಬ್ದಾರಿಯ ದಿನವಾಗಿದೆ ಅದ್ದರಿಂದ ಸಂಘಟನಾತ್ಮಕವಾಗಿ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕಾಗಿದೆ. ಪಕ್ಷವೂ ಅಧಿಕಾರಕ್ಕೆ ಬರುವುದಕ್ಕಾಗಿ ಮತ್ತು ಸಂಘಟನಾತ್ಮಕ ದೃಷ್ಠಿಯಿಂದ ನಾವು ಕೆಲವೊಂದು ಕಠಿಣ ನಿಲುವುಗಳÀನ್ನು ತೆಗೆದುಕೊಳ್ಳಬೇಕಾಗುತ್ತದೆ ಕಾರ್ಯಕರ್ತರು ಮನನೊಂದುಕೊಳ್ಳಬಾರದು. ನಮ್ಮ ಕಾರ್ಯಕರ್ತರಲ್ಲಿ ನನ್ನದೊಂದು ಮನವಿ ದಯಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದರು.
ಬನವಾಸಿ ಹೋಬಳಿಯ ವರದಾ ಏತ ನೀರಾವರಿಯ ಏರಡನೇ ಹಂತದ ಯೋಜನೆಯ ಸರ್ವೇ ಕಾರ್ಯ ಆರಂಭವಾಗಿದೆ. ಅತಿ ಶೀಘ್ರದಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಜೊತೆ ಚರ್ಚಿಸಿ ಎನ್‍ಜಿಓಗಳ ಮೂಲಕ ಈ ಭಾಗದ ಕೆರೆಗಳ ಹೊಳು ಎತ್ತುವ ಕಾರ್ಯವನ್ನು ಕೈಗೊಳ್ಳಲಿದ್ದೆವೆ. ಅಜ್ಜರಣಿಯ ಸೇತುವೆಯನ್ನು ಎತ್ತರ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಗ್ರಾಮೀಣ ಭಾಗದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲೂ ಅನುದಾನ ನೀಡಲಾಗಿದೆ. ಗುಡ್ನಾಪೂರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ 25ಲಕ್ಷ ರೂ. ಅನುದಾನ ನೀಡಲಾಗಿದೆ. ಈ ಭಾಗದಲ್ಲಿ 750ಕೋಟಿ ವೆಚ್ಚದಲ್ಲಿ 5 ಸಾವಿರ ಟನ್ ಸಾಮಥ್ರ್ಯದ ಹಣ್ಣು ಕೋಲ್ಡ್‍ಸ್ಟೋರೇಜ್ ಘಟಕ ನಿರ್ಮಾಣದ ಟೆಂಡರ್ ಕಾರ್ಯ ಶೀಘ್ರದಲ್ಲಿಯೇ ಆಗಲಿದೆ.
ಬನವಾಸಿ ಜನರ ಬಹುದಿನದ ಕನಸಾಗಿರುವ ಗ್ರೀಡ್ ಭಾಗ್ಯವೂ ಶೀಘ್ರದಲ್ಲಿ ಆಗಲಿದ್ದು ಇನ್ನೊಂದು ವಾರದಲ್ಲಿ ಗ್ರೀಡ್‍ಗೆ ಜಾಗ ಸಿಗಲಿದ್ದು ಅತಿ ಶೀಘ್ರದಲ್ಲಿ ಕಾಮಾಗಾರಿಯ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಗಟ್ಟಿಯಾದ ಆಡಳಿತದಿಂದ ದೇಶದ ಪ್ರತಿ ಗ್ರಾಮವೂ ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಸುರೇಶ ನಾಯ್ಕ್, ಪಕ್ಷದ ಪ್ರಮುಖರಾದ ದ್ಯಾಮಣ್ಣ ದೊಡಮನಿ, ಮಂಗಳ ನಾಯ್ಕ್, ಮಂಜುನಾಥ ನಾಯ್ಕ್, ಸುಕುಮಾರ ಗೌಡ, ಪ್ರಶಾಂತ ಗೌಡ, ಪ್ರಸನ್ನ ಹೆಗಡೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: