RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ ಖಂಡಿಸಿ ಜೆಡಿಎಸ್ ಕಾರ್ಯಕರ್ತರ ಮನವಿ

ಗೋಕಾಕ:ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ ಖಂಡಿಸಿ ಜೆಡಿಎಸ್ ಕಾರ್ಯಕರ್ತರ ಮನವಿ 

ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ ಖಂಡಿಸಿ ಜೆಡಿಎಸ್ ಕಾರ್ಯಕರ್ತರ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :

 

 

ಉತ್ತರ ಪ್ರದೇಶದ ಹಾಥ್ರಾಸನಲ್ಲಿ ನಡೆದ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ವಿಶೇಷ ಕಾನೂನು ರೂಪಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಜನತಾ ದಳ (ಜಾತ್ಯಾತೀತ) ಹಾಗೂ ಜನಪರ ಹೋರಾಟ ವೇದಿಕೆ ಕಾರ್ಯಕರ್ತರು ಮಂಗಳವಾರದಂದು ಪ್ರತಿಭಟನೆ ನಡೆಸಿದರು

ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ತಪ್ಪಿಸ್ಥರನ್ನು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು

ಉತ್ತರ ಪ್ರದೇಶದ ಹಾಥ್ರಾಸನಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಮತ್ತು ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ವಿಶೇಷ ಕಾನೂನು ರೂಪಿಸಲು ಕೇಂದ್ರ ಸಂಸತ್ತಿಗೆ ನಿರ್ದೇಶನ ನೀಡಬೇಕು. ಭಾರತದ ಸಂವಿಧಾನ ಪ್ರಕಾರ ಎಲ್ಲರಿಗೂ ಸಮಾನವಾದ ಹಾಗೂ ಕರ್ತವ್ಯಗಳ ಪ್ರತಿಪಾದನೆಗೆ ಸಂವಿಧಾನದಲ್ಲಿ ಹಕ್ಕು ಇರುವಾಗ ಹಾಗೂ ಅಪರಾಧಿಕ ಕಾನೂನನಲ್ಲಿ ಕೆಲವೊಂದು ಲೋಪದೋಷಗಳು ಇದ್ದು, ಇದರಿಂದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಸ್ತ್ರೀ ಲೋಕಕ್ಕೆ ನಾವು ಮಾಡುತ್ತಿರುವ ಘನಘೋರ ಅನ್ಯಾಯವಾಗಿದ್ದು, ದಯಾಳುಗಳಾದ ತಾವುಗಳು ಉತ್ತರ ಪ್ರದೇಶ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿ , ಅತ್ಯಾಚಾರದಂತ ಪ್ರಕರಣಗಳಲ್ಲಿ ಇನ್ನಷ್ಟು ಕಠಿಣ ಕಾನೂನುಗಳನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಜನತಾ ದಳ ಜಾತ್ಯಾತೀತ ಪಕ್ಷದ ಅಧ್ಯಕ್ಷರಾದ ಸಿ.ಬಿ.ಗಿಡ್ಡನವರ , ಜನಪರ ಹೋರಾಟ ಸಮಿತಿಯ ಅಧ್ಯಕ್ಷ ದಸ್ತಗೀರ ಪೈಲವಾನ, ಎಂ.ಆರ್.ಜೋತಾವರ, ಪ್ರಕಾಶ ಬಾಗೋಜಿ, ಬಿಲಾಲ ಕಲ್ಲೋಳಿ, ನ್ಯಾಯವಾದಿಗಳಾದ ಕೆ.ಆರ್.ಪವಾರ, ತಿರುಮಲ್ಲೇಶ, ಸಂತೋಷ ಪೂಜೇರಿ, ಶ್ರೀಮತಿ ಶಮಿಂಬಾನು ಮುಲ್ಲಾ, ಶ್ರೀಮತಿ ಹಸೀನಾ ಮಲ್ಲಾ ಸೇರಿದಂತೆ ಜನಪರ ಹೋರಾಟ ಸಮಿತಿಯ , ಜನತಾ ದಳ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Related posts: