RNI NO. KARKAN/2006/27779|Tuesday, April 16, 2024
You are here: Home » breaking news » ಗೋಕಾಕ:ಕುಗ್ರಾಮ ಉರುಬಿನಟ್ಟಿಯ ಹುಡುಗಿ ಈಗ ಪಿಎಸ್ಐ ಅಧಿಕಾರಿ

ಗೋಕಾಕ:ಕುಗ್ರಾಮ ಉರುಬಿನಟ್ಟಿಯ ಹುಡುಗಿ ಈಗ ಪಿಎಸ್ಐ ಅಧಿಕಾರಿ 

ಕುಗ್ರಾಮ ಉರುಬಿನಟ್ಟಿಯ ಹುಡುಗಿ ಈಗ ಪಿಎಸ್ಐ ಅಧಿಕಾರಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ವಿಶೇಷ ವರದಿ ಗೋಕಾಕ ಸೆ 17 :

 

 
ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಹುಟ್ಟಿ, ಹೊಟ್ಟೆ ತುಂಬಿಸಿಕೊಳ್ಳಲು ಕೃಷಿಯನ್ನೇ ಅವಲಂಬಿಸಿದ್ದ ರೈತನ ಮಗಳಿಗೆ ಈಗ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಆಗುವ ಯೋಗ ಕೂಡಿ ಬಂದಿದೆ.

ಗೋಕಾಕ ತಾಲೂಕಿನ ಉರುಬಿನಟ್ಟಿ ಗ್ರಾಮದ ಗಣಪತಿ ರಡ್ಡಿ ಹಾಗೂ ಶಿವಲೀಲಾ ರಡ್ಡಿ ಎಂಬ ಬಡ ದಂಪತಿಯ ಪುತ್ರಿ ಗೀತಾ ರಡ್ಡಿ ಇದೀಗ ಪೊಲೀಸ್‌ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
25 ವರ್ಷದ ಈ ಯುವತಿ ತಮ್ಮ ಉರುಬಿನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ರ ವರೆಗೆ, 8 ರಿಂದ 10 ರ ತರಗತಿಯನ್ನು ಅದೇ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಗಿಸಿ, ಪಿ.ಯು.ಸಿಯನ್ನು ಉರುಬಿನಟ್ಟಿ ಗ್ರಾಮದ ಸರಕಾರಿ ಕಾಲೇಜಿನಲ್ಲಿ ಶೇಕಡಾ 84% ಪ್ರತಿಶತ ಅಂಕಗಳೊಂದಿಗೆ ಉತೀರ್ಣವಾಗಿ ಕಾಲೇಜಿಗೆ ಕೀರ್ತಿ ತರುವುದರ ಜೊತೆಗೆ ಕಾಲೇಜಿನ ಹಾಜರಾತಿಯನ್ನು ಹೆಚ್ಚಿಸಿದ ಕೀರ್ತಿಗೆ ಭಾಜನಳಾಗಿದ್ದಾಳೆ ಹಾಗೂ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಪದವಿಯನ್ನು ಮುಗಿಸಿದ್ದಾಳೆ.

ಐಎಎಸ್ ಪರೀಕ್ಷೆ ಪಾಸಾಗಿ ಉನ್ನತ ಅಧಿಕಾರಿಯಾಗಿ ದೇಶ ಹಾಗೂ ದೇಶದ ಬಡ ಜನರ ಸಹಾಯ ಮಾಡಬೇಕೆನ್ನುವ ಗುರಿ ಹೊಂದಿರುವ ಗೀತಾ ರಡ್ಡಿಗೆ ಓದಲು ಅವರ ತಂದೆ ಗಣಪತಿ ರಡ್ಡಿ ಅವರ ಸಹಾಯ ಸಹಕಾರ ಅತ್ಯಂತ ಪ್ರಮುಖವಾಗಿದೆ.ಮಗಳು ಪರೀಕ್ಷೆಗಳಲ್ಲಿ ಎಡವಿದಾಗ ಮಗಳಿಗೆ ಓದಲು ಧೈರ್ಯ ತುಂಬಿ ಹುರಿದುಂಬಿಸಿ ಪರೀಕ್ಷೆಗಳನ್ನು ಎದುರಿಸಲು ಮಾನಸಿಕ ಸ್ಥೈರ್ಯ ತುಂಬಿ ಮಗಳು ಅಂದುಕೊಂಡದ್ದನ್ನು ಸಾಧಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಿದ್ದಾರೆ. 3 ವರ್ಷದ ಹಿಂದೆ ಸಹೋದರನೋರ್ವ ಪೊಲೀಸ್‌ ಇಲಾಖೆ ಸೇರಿದ್ದಾರೆ ಇನ್ನೋರ್ವ ಕಿರಿಯ ಸಹೋದರ ಇನ್ನೂ ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟಾರೆ ಬಡ ರೈತ ಕುಟುಂಬದಲ್ಲಿ ಅದರಲ್ಲೂ ಕುಗ್ರಾಮದ ಸರಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ತಮ್ಮ ವ್ಯಾಸಂಗ ಮುಗಿಯಿಸಿ ಪೊಲೀಸ ಅಧಿಕಾರಿಯಾಗಿ ಆಯ್ಕೆಯಾಗಿರುವ ಗೀತಾ ರಡ್ಡಿ ಇವಳ ಸಾಧನೆ ಇತರರಿಗೆ ಮಾದರಿಯಾಗಿದೆ.
ಪಿಎಸ್ಐ ನೇಮಕಾತಿತಲ್ಲಿ ರಾಜ್ಯಕ್ಕೆ 25 ನೇ ರ‌್ಯಾಂಕ್
ಪಡೆದ ಗ್ರಾಮೀಣ ಪ್ರತಿಭೆ ಗೀತಾ :

ತಂದೆ-ತಾಯಿಗೆ 7 ಎಕರೆ ಜಮೀನಿದ್ದರೂ ನೀರಾವರಿ ಇಲ್ಲದಿದ್ದರಿಂದ ಬೆಳೆ ಬಾರದೇ ಇರುವ ಹಿನ್ನೆಲೆಯಲ್ಲಿ ಕೆಲವೊಮ್ಮೆ ಸಾಕಷ್ಟು ತೊಂದರೆಯನ್ನು ಅನುಭವಿಸುವ ಘನಘೋರ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಗೀತಾ ಇವಳ ತಂದೆ ಗಣಪತಿ ರಡ್ಡಿ ಎಷ್ಷೇ ಕಷ್ಟ ಬಂದರೂ ಮಕ್ಕಳನ್ನು ಓದಿಸಿ ಇಂದು ಒಳ್ಳೆಯ ನಾಗರಿಕರನ್ನಾಗಿ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಹೀಗೆ ಬಡತನದ ಮಧ್ಯೆಯೂ ಶ್ರಮವಹಿಸಿ ಅಭ್ಯಾಸ ಮಾಡಿ ಪಿಎಸ್ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 25 ಸ್ಥಾನ ಪಡೆದು ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ ಉರುಬಿನಟ್ಟಿ ಗ್ರಾಮದ ಗೀತಾ ರಡ್ಡಿ .

ಬಡವಳಾಗಿ ಸಾಧನೆ ಮಾಡಬೇಕೆಂಬ ಛಲ ಇತ್ತು, ಅದು ಈಡೇರಿದೆ, ಬಡವರಿಗೆ ಸಹಾಯ ಮಾಡುವ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುತ್ತೇನೆ. ಜನರಿಗೆ ನನ್ನ ವಾಪ್ತಿಯಲ್ಲಿ ಸಹಾಯ-ಸಹಕಾರ ಮಾಡುತ್ತೇನೆ.
ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಕರ, ಪಾಲಕರ ಮತ್ತು ಸಮುದಾಯದ ಪ್ರೋತ್ಸಾಹವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಲ್ಲರು ಅದರಲ್ಲಿ ಸರಕಾರಿ ಶಾಲೆಗಳಲ್ಲಿ ಓದಿದ ನನಗೆ ಗುರುಗಳ ಯೋಗ್ಯ ಮಾರ್ಗದರ್ಶನ ಸಿಕ್ಕಿದೆ. ಸ್ವಾವಲಂಬನೆ ಇಂದಿನ ಯುವತಿಯರ ಕನಸಾಗಿದೆ ಆ ದಿಶೆಯಲ್ಲಿ ನಮ್ಮ ಪ್ರಯತ್ನಗಳಾಗಬೇಕು ಎಂದು ಪಿಎಸ್‌ಐ ಆಗಿ ಆಯ್ಕೆಯಾದ ಯುವತಿ ಗೀತಾ ಗಣಪತಿ ರಡ್ಡಿ ಅವರು ಹೇಳಿದ್ದಾರೆ. 

ಐಎಎಸ್ ಆಧಿಕಾರಿಯಾಗುವ ಗುರಿ : ರಾಜ್ಯಕ್ಕೆ 25 ನೇ ಸ್ಥಾನ ಪಡೆದು ಪಿಎಸ್ಐ ಯಾಗಿ ಆಯ್ಕೆಯಾಗಿರುವ ಗೀತಾ ರಡ್ಡಿ ಇಷ್ಟಕ್ಕೆ ಸುಮ್ಮನ್ನಾಗದೆ ಮುಂದೆ ಐಎಎಸ್ ಪರೀಕ್ಷೆ ಎದುರಿಸಿ ಉನ್ನತ ಅಧಿಕಾರಿಯಾಗಿ ಬಡವರಿಗೆ ಸಹಾಯ ಮಾಡುವ ಅಭಿಲಾಷೆ ಹೊಂದಿದ್ದಾರೆ. ಈಗಾಗಲೇ ಆಂದ್ರಪ್ರದೇಶ ಹೈದರಾಬಾದನ ಆರ್.ಎಸ್ ರೆಡ್ಡಿ ಐಎಎಸ್ ತರಬೇತಿ ಶಾಲೆಯಲ್ಲಿ ಒಂದು ವರ್ಷ ಐಎಎಸ್ ತರಬೇತಿ ಪೂರ್ಣಗೊಳಿಸಿರುವ ಗೀತಾ ರಡ್ಡಿ ಇವಳು ಮುಂದೆ ಐಎಎಸ್ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾಳೆ. ಮೊನ್ನೆ ನಡೆದ ಕೆಎಎಸ್ ಪರೀಕ್ಷೆಯನ್ನು ಬರೆದಿರುವ ಗೀತಾ ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾಳೆ. ಇಂತಹ ಗ್ರಾಮೀಣ ಪ್ರದೇಶದ ರೈತರು ಕುಟುಂಬದ ಹೆಣ್ಣು ಮಗು ಅಮೋಘ ಯಶಸ್ಸು ಸಾಧಿಸಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ. ತನ್ನ ಭವಿಷ್ಯ ರೂಪಿಸುವಲ್ಲಿ ಯಶಸ್ವಿ ಆಗುವುದರ ಜೊತೆಗೆ ಇತರ ಮಕ್ಕಳಿಗೆ ಸ್ಪೂರ್ತಿ ಆಗಿದ್ದಾರೆ.

Related posts: