ಗೋಕಾಕ:ಪ್ರಭಾಶುಗರ್ ಬಾಯ್ಲರ್ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಭಾವಿ ಸಿದ್ಧಲಿಂಗ ಮಹಾಸ್ವಾಮಿಗಳು
ಪ್ರಭಾಶುಗರ್ ಬಾಯ್ಲರ್ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅರಭಾವಿ ಸಿದ್ಧಲಿಂಗ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 14 :
ದುರದುಂಡೇಶ್ವರರ ಕೃಪಾಶೀರ್ವಾದ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದೆ ಎಂದು ಅರಭಾವಿ ದುರದುಂಡೀಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಇಲ್ಲಿಗೆ ಸಮೀಪದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ 42ನೇ ಬಾಯ್ಲರ್ ಪ್ರದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದ ಅವರು, ದುರದುಂಡೀಶ್ವರರ ಪಾದಸ್ಪರ್ಷದ ಸ್ಥಳದಲ್ಲಿ ಈ ಕಾರ್ಖಾನೆಯು ಸ್ಥಾಪಿತಗೊಂಡಿದ್ದು, ಸದಾ ಕಾಲ ಅವರ ಆಶೀರ್ವಾದವು ಕಾರ್ಖಾನೆಗೆ ಇರುತ್ತದೆ. ರೈತರು ಈ ಕಾರ್ಖಾನೆಯನ್ನು ತಮ್ಮದೆಂದು ಭಾವಿಸಿ ತಮ್ಮ ಕಬ್ಬನ್ನು ಪೂರೈಸಿ ತಮ್ಮ ಆರ್ಥಿಕ ಪ್ರಗತಿಯೊಂದಿಗೆ ಕಾರ್ಖಾನೆಯ ಅಭಿವೃದ್ಧಿಗೂ ಶ್ರಮಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ದಿಗ್ಧರ್ಶಕ ಮಂಡಳಿ ಸದಸ್ಯರುಗಳಾದ ಬಸಗೌಡ ಪಾಟೀಲ, ಭೂತಪ್ಪ ಗೋಡೇರ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗಪ್ಪ ಪೂಜೇರಿ, ಕೃಷ್ಣಪ್ಪ ಬಂಡ್ರೊಳ್ಳಿ, ಗಿರೀಶ ಹಳ್ಳೂರ, ಮಲ್ಲಿಕಾರ್ಜುನ ಕಬ್ಬೂರ, ಸಿದ್ದಲಿಂಗಪ್ಪ ಕಂಬಳಿ, ಮಾಳಪ್ಪ ಜಾಗನೂರ, ಯಲ್ಲವ್ವ ಸಾರಾಪೂರ, ಲಕ್ಕವ್ವ ಬೆಳಗಲಿ, ಗಣ್ಯ ವರ್ತಕ ವಿಕ್ರಮ ಅಂಗಡಿ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಮಂಟೂರ, ಕಬ್ಬು ಅಭಿವೃದ್ಧಿ ಅಧಿಕಾರಿ ಜೆ.ಆರ್. ಬಬಲೇಶ್ವರ, ಕಛೇರಿ ಅಧೀಕ್ಷಕ ಈರಣ್ಣಾ ಜಂಬಗಿ, ರೈತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು