RNI NO. KARKAN/2006/27779|Thursday, April 25, 2024
You are here: Home » breaking news » ಗೋಕಾಕ:ಗೋಕಾದಲ್ಲಿ ಬೆಳಗಾವಿ ಪೊಲೀಸರ ಭಾರಿ ಭೇಟೆ : ಪಿಸ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ

ಗೋಕಾಕ:ಗೋಕಾದಲ್ಲಿ ಬೆಳಗಾವಿ ಪೊಲೀಸರ ಭಾರಿ ಭೇಟೆ : ಪಿಸ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ 

ಗೋಕಾದಲ್ಲಿ ಬೆಳಗಾವಿ ಪೊಲೀಸರ ಭಾರಿ ಭೇಟೆ : ಪಿಸ್ತೂಲ ಸೇರಿದಂತೆ ಹಲವು ಮಾರಕಾಸ್ತ್ರ ಮತ್ತು 30 ಲಕ್ಷ ನಗದು ವಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 2 :

 

 

ದಲಿತ ಯುವಕನ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಮನೆಗಳ ಮೇಲೆ ಬೆಳಗಾವಿ ಪೋಲೀಸರು ಎಸ್.ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ದಾಳಿ ನಡೆಸಿದ ಘಟನೆ ಬುಧವಾರದಂದು ನಗರದಲ್ಲಿ ಜರುಗಿದೆ.

ಈ ಕುರಿತು  ನಗರದ ಡಿವೈಎಸ್ಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಎಸ್.ಪಿ ಲಕ್ಷ್ಮಣ ನಿಂಬರಗಿ ಅವರು 

ಮೇ ತಿಂಗಳಲ್ಲಿ ನಗರದಲ್ಲಿ ನಡೆದ ದಲಿತ ಯುವಕ ಸಿದ್ದು ಕನಮಡ್ಡಿ ಕೊಲೆ ಪ್ರಕರಣಕ್ಕೆ ಬೆನ್ನತಿರುವ ಪೊಲೀಸರು ಗೋಕಾಕ ನಗರದಲ್ಲಿ  ಆರೋಪಿಗಳ ಸಹಚರರ 13 ಮನೆಗಳಲ್ಲಿ ದಾಳಿ ನಡೆಸಿ 1 ಪಿಸ್ತೂಲ , 20 ಜೀವಂತ ಗುಂಡುಗಳು , 4 ತಲವಾರ, 3 ಜಂಬೆ, 22 ಮೊಬೈಲ್ ಪೋನ, 4 ಸೀಮ್ ಕಾರ್ಡ , 11 ಪಾಸ ಬುಕ್ಕ ಮತ್ತು 12 ಅಸಲು ಮತ್ತು 12 ನಕಲು ಆಸ್ತಿ ದಾಖಲಾತಿಗಳು,  30,48 ,460 ರೂ ನಗದು ಸೇರಿದಂತೆ ಇನ್ನೀತರ ದಾಖಲಾತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣದ ವಿವರ :

ದಿನಾಂಕ : 06-05-2020 ರಂದು 2250 ಗಂಟೆಗೆ , ದೀಪಕ ಶ್ರೀಕಾಂತ ಇಂಗಳಗಿ ಸಾ || ಆದಿ ಜಾಂಬವ ನಗರ ಇವರು ವಿದ್ಯಾದಿ ನೀಡಿದ್ದರಲ್ಲಿ ಗಾಯಾಳು ಸಿದ್ದಪ್ಪ ಅರ್ಜುನ ಕನಮಡ್ಡಿ ಸಾ | ಆದಿಜಾಂಬವ ನಗರ ಗೋಕಾಕ ಇವನಿಗೆ ಆರೋಪಿತರು ಈ ಮೊದಲು ಮೃತ ರೋಹಿತ ಪಾಟೀಲ ಇವನ ಕೊಲೆ ಪ್ರಕರಣದಲ್ಲಿ ದಲಿತರು ಮತ್ತು ಮಾರಾಠಾ ಹುಡುಗರ ಮದ್ಯ ಪ್ರಕರಣಗಳು ದಾಖಲಾಗಿದ್ದು , ಇದರಲ್ಲಿ ಗಾಯಾಳು ದಲಿತ ಮುಖಂಡ ಇದ್ದು ಒಂದೆ ಆದ ತಂಟೇದ ಸಿಟ್ಟನ್ನು ಹಿಡಿದು ಇದರಲ್ಲಿಯ ಆರೋಪಿತರು ಮಾರಾಠಾ ಜಾತಿಗೆ ಸೇರಿದವರು ಇದ್ದು ಗಾಯಾಳು ಪರಿಶಿಷ್ಟ ಜಾತಿಗೆ ಸೇರಿದವನು ಅಂತಾ ಗೊತ್ತಿದ್ದರೂ ಕೂಡ ಆರೋಪಿತರೆಲ್ಲರೂ ಬೇಕಾಯೇಶೀರ ಮಂಡಳಿಯಾಗಿ ವಾಹನಗಳ ಮೇಲಿಂದ ಆದಿಜಾಂಬದ ನಗರ ಹಾರಕ್ಕೆ ಬಂದು ಗಾಯಾಳುವಿಗೆ ಜಾತಿ ಎತ್ತಿ ಬೈದು ನಿಂದನೆ ಮಾಡಿ ಅವರೆಲ್ಲರೂ ಕೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ತಲವಾರಗಳಿಂದ ಸಿದ್ಧಪ್ಪ ಇವನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದರ ಬಗ್ಗೆ ಗೋಕಾಕ ಶಹರ ಪೊಲೀಸ್ ಠಾಣೆಯ 72/20211 ಕಲಂ : 143 , 147 , 148 , 307 , 504 , 506 ಸಹಕಲಂ 149 ಐಪಿಸಿ , ಮತ್ತು 3 ( 2 ) ( V ) SC / ST PA Act 1989 ( Amendment Act 01/2016 ) , ನೇದ್ದಕ್ಕೆ ದಾಖಲಾಗಿ ತನಿಖೆ ಕೈಕೊಂಡಿದ್ದು ಇತ್ತು . ಸದರಿ ಗಾಯಾಳು ಸಿದ್ದಪ್ಪ ಅರ್ಜುನ ಕನಮಡ್ಡಿ ಸಾ || ಆದಿಜಾಂಬವ ನಗರ , ಕೆ.ಎಲ್.ಇ ಆಸ್ಪತ್ರೆ ಬೆಳಗಾವಿಯಲ್ಲಿ ಉಪಚಾರದಲ್ಲಿರುವಾಗ ಉಪಚಾರ ಫಲಿಸದೇ ದಿನಾಂಕ : 07-05-2020 ರಂದು ಮರಣ ಹೊಂದಿದ್ದು , ಕಲಂ : 302 ಐ.ಪಿ.ಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಗೊಂಡಿದ್ದು ಇತ್ತು . ಪ್ರಕರಣ ದಾಖಲಾದ ದಿನದಿಂದ ತನಿಖೆಯ ಕಾಲಕ್ಕೆ ಶ್ರೀ ಎಚ್.ಜಿ.ರಾಘವೇಂದ್ರ ಸುಹಾಸ ಐ.ಪಿ.ಎಸ್ . ಮಾನ್ಯ ಆರಕ್ಷಕ ಮಹಾನೀರಿಕ್ಷಕರು ಉತ್ತರ ವಲಯ ಬೆಳಗಾವಿ , ಹಾಗೂ ಶ್ರೀ ಲಕ್ಷ್ಮಣ ನಿಂಬರಗಿ ಐ.ಪಿ.ಎಸ್ . ಪೊಲೀಸ್ ಅಧೀಕ್ಷಕರು ಬೆಳಗಾವಿರವರು ಶ್ರೀ ಅಮರನಾಥ ರೆಡ್ಡಿ ಹೆಚ್ಚುವರಿ ಎಸ್.ಪಿ. ಬೆಳಗಾವಿ , ಶ್ರೀ ಶಂಕರಗೌಡ ಪಾಟೀಲ ಡಿ.ಎಸ್.ಪಿ , ರಾಮದುರ್ಗರವರಿಗೆ ಸಮರ್ಥ ಮಾರ್ಗದರ್ಶನ ನೀಡಿ ಶ್ರೀ : ಗೋಪಾಲ ರಾಠೋಡ ಸಿ.ಪಿ.ಐ ಗೋಕಾಕರವರ ನೇತೃತ್ವದಲ್ಲಿ ತಂಡ ರಚನೆ ಮಾಡಿ , ಈ ಕೆಳಗಿನ ಆರೋಪಿತರಾದ , 1. ಗಂಗಾಧರ ಸಂತ್ರಾಮ ಶಿಂಧೆ ವಯಸ್ಸು 26 ವರ್ಷ ಸಾ || ಮರಾಠಾಗಲ್ಲಿ ಗೋಕಾಕ 2 , ವಿನಾಯಕ ಬಸವರಾಜ ಹಡಗಿನಾಳ ವಯಸ್ಸು 22 ವರ್ಷ ಸಾ .ಮೊಕಾಶಿಯಲ್ಲಿ ಗೋಕಾಕ 3. ವಿಠಲ ಪರಶುರಾಮ ಪವಾರ ವಯಸ್ಸು 23 ವರ್ಷ ಸಾ || ಮೊಕಾಶಿಗಲ್ಲಿ ಗೋಕಾಕ 4. ವಿನೋದ ಚಂದ್ರು ಹೊಸಮನಿ ವಯಸ್ಸು 22 ವರ್ಷ ಸಾ || ಸೋಮವಾರ ಪೇಠ ಗೋಕಾಕ , 5 , ಕಿರಣ ವಿಜಯ ದೊಡ್ಡನ್ನವರ ವಯಸ್ಸು 22 ವರ್ಷ ಸಾ || ಅಂಬಿಗೆರಗಲ್ಲಿ ಗೋಕಾಕ , 6 , ರವಿ ಭೀಮಶಿ ಚೂನನ್ನವರ ವಯಸ್ಸು 22 ವರ್ಷ ಸಾ || ಸಿದ್ದೇಶ್ವರ ನಗರ ಗೋಕಾಕ . 7. ಕೇದಾರಿ ಬಸವಣ್ಣ ಜಾಧದ ವಯಸ್ಸು -36 ವರ್ಷ ಸಾ || ಮರಾಠಾ ಗಲ್ಲಿ ಗೋಕಾಕ . 8. ಸುನಿಲ ಮಲ್ಲಿಕಾರ್ಜುನ ಮರಕಿಭಾವಿ ವಯಸ್ಸು 43 ವರ್ಷ ಸಾ | ಬಸವನಗರ , ಗೋಕಾಕ , 9. ಸಂತೋಷ ಪಾಂಡುರಂಗ ಚಿಗಡೊಳ್ಳಿ ವಯಸ್ಸು 21 ವರ್ಷ ಸಾ || ಮರಾಠಾ ಗಲ್ಲಿ , ಗೋಕಾಕ . ಇವರನ್ನು ದಸ್ತಗೀರಿ ಮಾಡಿ , ವಿಚಾರಣೆಗೆ ಒಳಪಡಿಸಿದಾಗ , ಕೃತ್ಯಕ್ಕೆ ಬಳಸಿದ ಆಯುಧಗಳನ್ನು , ವಸ್ತುಗಳನ್ನು ವಶಪಡಿಸಿಕೊಂಡು ಕಲಂ : 120 ( ಬಿ ) ಐಪಿಸಿ ಮತ್ತು 25 ( 1 ) ಎ ಭಾರತೀಯ ಆಯುಧ ಕಾಯ್ದೆ 1959 ನೇದ್ದವುಗಳನ್ನು ಅಳವಡಿಸಿಕೊಂಡಿದ್ದು ಅದೆ .

ತನಿಖೆಯ ಕಾಲಕ್ಕೆ ಇದರಲ್ಲಿಯ ಆರೋಪಿತರು ಸನ್ 2006 ರಿಂದ ಟೈಗರ್ ಗ್ಯಾಂಗ ಎಂಬುವ ಹೆಸರಿನ ಗ್ಯಾಂಗ್ ಕಟ್ಟಿಕೊಂಡು ಹಣ ಗಳಿಸುವ ಸಲುವಾಗಿ ಮತ್ತು ವಯಕ್ತಿಕ ಪ್ರತಿಷ್ಟೆಯನ್ನು ಹೆಚ್ಚಿಸುವ ಸಲುವಾಗಿ ಸಂಘಟಿತರಾಗಿ ಸುಮಾರು ಲಾಭಕ್ಕಾಗಿ ಕೊಲೆ , ಕೊಲೆಗೆ ಪ್ರಯತ್ನ , ಡಕಾಯಿತಿ , ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದು , ಸದರಿ ಆರೋಪಿತರು ಟೈಗರ ಗ್ಯಾಂಗ ಎಂಬ ಸಂಘಟನೆಯನ್ನು ಕಟ್ಟಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಅಪರಾಧಗಳನ್ನು ಎಸಗಿರುತ್ತಿರುವದು ಹಾಗೂ ಸಮಾಜದಲ್ಲಿನ ಹದಿ ಹರಿಯದ ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಸದಸ್ಯರನ್ನಾಗಿ ಮಾಡಿಕೊಂಡು ಅವರನ್ನು ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವದು ಸ್ಪಷ್ಟವಾಗಿ ಕಂಡು ಬರುತ್ತಿದ್ದು ಹಾಗೂ ಸದರಿ ಆರೋಪಿತರು ಟೈಗರ ಗ್ಯಾಂಗ ಎಂಬುವ ಸಂಘಟಿತ ಗ್ಯಾಂಗೆ ಕಟ್ಟಿಕೊಂಡು ಈಗಾಗಲೇ ಸಾರ್ವಜನಿಕರಲ್ಲಿ ಭಾರಿ ಭಯವನ್ನುಂಟು ಮಾಡಿ ಪ್ರಕರಣಗಳಲ್ಲಿ ಸಾಕ್ಷಿದಾರರನ್ನು ಹೆದರಿಸಿ , ಹಣದ ಆಮಿಷ್ಯವಡ್ಡಿ , ಹಾಗೂ ಪುರಾವೆಗಳನ್ನು ನಾಶಪಡಿಸುವದರಲ್ಲಿ ಇವರು ನಿಸ್ಸಿಮರಾಗಿರುತ್ತಾರೆ . ಆದ್ದರಿಂದ ಎಲ್ಲ ಆರೋಪಿತರ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ( KCOCA ) ಕಲಂ : 3 ಮತ್ತು ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತದೆ . ಇದರಲ್ಲಿ ಆರೋಪಿತರ ಹಾಗೂ ಅವರ ಸಹಚರರ ಮನೆಗಳ ಮೇಲೆ ದಾಳಿ ಮಾಡಿ , ಶೋಧ ಮಾಡಿದಾಗ ಈ ಕೆಳಕಂಡ ಆಯುಧ , ಹಣ , ಮತ್ತು ದಾಖಲಾತಿಗಳನ್ನು ಜಪ್ತು ಮಾಡಲಾಗಿದೆ . ರೇಡ ಕಾಲಕ್ಕೆ ಜಪ್ತಾದ ಮಾಲಿನ ವಿವರ , ದಿನಾಂಕ 01-09-2020 01 ನಗದ ಹಣ 30,48,460 / ರೂ 02 ಪಿಸ್ತೂಲ 01 03 ಜೀವಂತ ಗುಂಡುಗಳು 20 504 ತಲವಾರಗಳು ( 05 ಜಂಬೆ 03 06 ಮೊಬೈಲಗಳು 16 + 6 = ? 07 ಸಿಮಕಾರ್ಡ ಗಳು 04 08 ಪಾಸಬುಕ್ಕಗಳು 092 = II 49 ಆಸ್ತಿಯ ದಾಖಲಾತಿಗಳು 12 ಆಸಲು 12 ನಕಲು 10 . ಪಾನಕಾರ್ಡ 01 . ಆಧಾರ ಕಾರ್ಡ 01 R. ವೋಟರ ಐದು 01 13 04 ಬಾಂಡ್ ಘಜರ್ ಗಳು 01 15 ಎ ಟಿ ಎಮ್ 02 16 ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ 0 ಸಂಖ್ಯೆ : 72/2020 ನೇದ್ದಕ್ಕೆ ಸಂಭಂಧಿಸಿದ ದಾಖಲಾತಿಗಳು ಖಾಲಿ ಚಕ್ಕಗಳು ಸದರಿ ಪ್ರಕರಣವು ಸದ್ಯ ತನಿಖಾ ಹಂತದಲ್ಲಿದ್ದು , ತನಿಖೆ ಮುಂದುವರೆಸಲಾಗಿದೆ .

Related posts: