ಘಟಪ್ರಭಾ:ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ

ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ : ಸುರೇಶ ಪಾಟೀಲ
ಘಟಪ್ರಭಾ ಮೇ 21 : ನಿಷ್ಠಾವಂತ ಕಾರ್ಯಕರ್ತರ ಶಾಪ ತಟ್ಟಿದ್ದರಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾದ್ಯವಾಗಲಿಲ್ಲ ಎಂದು ಬಿಜೆಪಿ ಬಂಡಾಯ ಹಾಗೂ ಗೋಕಾಕ ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಹೇಳಿದರು.
ಅವರು ರವಿವಾರದಂದು ಲೋಳಸುರ ಗ್ರಾಮದಲ್ಲಿ ಕರೆದ ಚುನಾವಣೆ ನಂತರದ ಆತ್ಮಾವಲೋಕನ ಸಭೆಯಲ್ಲಿ ಮಾಡನಾಡಿ, ಇತ್ತೀಚಿಗೆ ಬಿಜೆಪಿ ಪಕ್ಷದಲ್ಲಿ ಜಾತಿಯತೆ, ಸ್ವಜನ ಪಕ್ಷಪಾತ, ಹಣದ ಪ್ರಾಭಲ್ಯತೆ ಹೆಚ್ಚಾಗಿದೆ. ಪಕ್ಷದಲ್ಲಿ 40-50 ವರ್ಷಗಳಿಂದ ನಿಷ್ಠಾವಂತರಾಗಿ ದುಡಿದ ಕಾರ್ಯಕರ್ತರನ್ನು ಹೊರಗಿಟ್ಟು ಆಮದು ಮುಖಂಡರಿಗೆ ಟಿಕೇಟ ನೀಡಿದ್ದೇ ಚುನಾವಣೆಯಲ್ಲಿ ಸರ್ಕಾರ ರಚಿಸುವಷ್ಟು ಶಾಸಕರು ಆಯ್ಕೆ ಆಗದಿರುವದಕ್ಕೆ ಕಾರಣವಾಯಿತು. ನಿಷ್ಠಾವಂತ ಕಾರ್ಯಕರ್ತರಗೆ ಟಿಕೀಟ್ ನೀಡಿದ್ದರೆ ಪಕ್ಷಕ್ಕೆ ಈ ದುಸ್ಥಿತಿ ಬರುತ್ತಿರಲಿಲ್ಲ. ಮುಂದೆಯಾದರೂ ರಾಜ್ಯಾಧ್ಯಕ್ಷರು ಈ ವಿಷಯದ ಕಡೆಗೆ ಗಮನ ಹರಿಸಿ ಚಾಣಾಕ್ಷತೆಯಿಂದ ಚುನಾವಣೆ ಎದುರಿಸಿದರೆ 150 ಸ್ಥಾನಗಳನ್ನು ಗೆಲ್ಲಲು ಸಾದ್ಯ ಎಂದರು. ವಿಧಾನ ಸಭೆ ಚುಣಾವನೆಯಲ್ಲಿ ನನ್ನೂಂದಿಗಿದ್ದು ಪ್ರಚಾರ ಕಾರ್ಯದಲ್ಲಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಹಾಗೂ ಮತದಾರ ಬಾಂವರಿಗೂ ಕೃತಜ್ಞತೆ ತಿಳಿಸಿದರು.
ಚುನಾವಣೆ ಪ್ರಚಾರ ಕಾರ್ಯವನ್ನು ನಿರ್ವಹಿಸಿದ ನ್ಯಾಯವಾದಿಗಳು ಹಿರಿಯ ಧುರೀಣರಾದ ಲಕ್ಷ್ಮಣ ತಪಶಿ ಮಾತನಾಡಿ ರಾಷ್ಟ್ರೀಯ ಪಕ್ಷಗಳು ಖರ್ಚು ಮಾಡಿದಷ್ಟು ನಮ್ಮಲ್ಲಿ ಹಣವಿಲ್ಲಿದಿದ್ದರೂ ನಿಷ್ಠಾವಂತ ಕಾರ್ಯಕರ್ತರ ಪ್ರಭಲ ಪಡೆ ನಮ್ಮೂಂದಿಗೆ ಇದ್ದ ಕಾರಣ ನಾವು ಯಾವದೇ ತೊಂದರೆ ಇಲ್ಲದೆ ಚುನಾವಣೆಯನ್ನು ನಮ್ಮದೇ ಆದ ವ್ಯವಸ್ಥೆಯಲ್ಲಿ ಎದುರಿಸಿದ್ದೇವೆ. ಈ ಚುನಾವಣೆಯಲ್ಲಿ ಕಾರ್ಯಕರ್ತರು ನಿಷ್ಠೆ ಹಾಗೂ ತನುಮನದಿಂದ ದುಡಿದರು. ಇಂತಹ ನಿಷ್ಠಾವಂತ ನೊಂದ ಕಾರ್ಯಕರ್ತರು ಜಿಲ್ಲೆಯ ತುಂಬ ಇದ್ದು ಬರುವ ದಿನಗಳಲ್ಲಿ ಅವರನ್ನು ಬೆಟ್ಟಿಯಾಗಿ ಮುಖ್ಯವಾಹಿನಿಗೆ ತಂದು ಚುನಾವಣೆ ಎದುರಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಪ್ರವೀನ ಚುನಮುರಿ, ಜಿಎಸ್.ರಜಪೂತ, ಸಿದ್ದಪ್ಪ ಪೂಜೇರಿ, ಶ್ರೀಶೈಲ ದಂಡಿನ, ಸಂತೋಷ ಖೆಮಲಾಪೂರೆ, ಚಿರಾಕಲಿಶಾ ಮಕಾಂದಾರ, ಬಾಳಪ್ಪ ಮುಂಜೋಜಿ, ಸಂತೋಷ ಮಾವರಕರ, ವಿಜಯಕುಮಾರ ಪಾಟೀಲ, ಸಂಜೀವ ನಾಯಿಕ, ಗುರು ಕುಂಬಾರ, ಭರಮಣ್ಣಾ ತೋಳಿ, ಯಲ್ಲಾಲಿಂಗ ನಾಯಿಕ, ರಾಜು ಪಾಟೀಲ, ಅಂಕುಶ ಕೋಪರಡೆ, ಕೃಷ್ಣಾ ಪತ್ತಾರ, ಪ್ರಲ್ಹಾದಸಿಂಗ ರಜಪೂತ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
