RNI NO. KARKAN/2006/27779|Monday, July 14, 2025
You are here: Home » breaking news » ನೇಗಿನಹಾಳ :ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ : ಬಾಬಾಸಾಹೇಬ ಪಾಟೀಲ

ನೇಗಿನಹಾಳ :ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ : ಬಾಬಾಸಾಹೇಬ ಪಾಟೀಲ 

ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ : ಬಾಬಾಸಾಹೇಬ ಪಾಟೀಲ

 

ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಅ 15  :

 

ಅಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನವು ಭಾರತೀಯರಿಗೆ ಹಬ್ಬವಿದ್ದಂತೆ ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬಂದು ಸ್ವತಂತ್ರ ಆಡಳಿತ ನಡೆಸಲು ಸೌಭಾಗ್ಯ ದೊರೆತ ದಿನವಾಗಿದ್ದು ಇದನ್ನು ಪ್ರತಿಯೊಬ್ಬರೂ ಆತ್ಮಸಂತೋಷದಿಂದ ಆಚರಿಸಬೇಕೆಂದು ಸಂಪಗಾವಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು.

ನೇಗಿನಹಾಳ ಗ್ರಾಮದ ಲಿಂಗಾಯತ ಅಭಿವೃದ್ಧಿ ಸಂಸ್ಥೆಯ ಶ್ರೀಗುರು ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದರು.

ಇವತ್ತಿನ ದಿನ ಕಿತ್ತೂರು ಚನ್ನಮ್ಮನ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವಾಗಿದ್ದು ಪ್ರತಿಯೊಬ್ಬರೂ ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು. ಮುಂಜಾನೆಯಿಂದ ನಿರಂತರ ಮಳೆಯಿಂದ ಕಾರ್ಯಕ್ರಮಗಳು ಬಹಳಷ್ಟು ಅಸ್ತವ್ಯಸ್ತತೆಯಿಂದ ನಡೆಯಿತು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಮಳೆಯಲ್ಲಿಯೇ ನೆನೆದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅದ್ಯಕ್ಷೆ ರೋಹಿಣಿ ಪಾಟೀಲ, ಈರಣ್ಣಾ ಉಳವಿ, ಚಿದಾನಂದ ಬೆಳಗಾವಿ, ಹನುಮಂತಪ್ಪ ಬೆಳವಡಿ, ನಾಗರಾಜ ಕುಂಕೂರ, ಶಿವಾನಂದ ಮೆಟ್ಯಾಲ, ಮುಖ್ಯ ಶಿಕ್ಷಕಿ ನಾಗಮ್ಮ ಅವರೊಳ್ಳಿ ಮತ್ತಿತ್ತರರು ಉಪಸ್ಥಿತರಿದ್ದರು.

Related posts: