RNI NO. KARKAN/2006/27779|Saturday, May 10, 2025
You are here: Home » breaking news » ಬೆಳಗಾವಿ:ಕನ್ನಡ ವಿರೋಧಿ ನಿಲುವು : ಸಚಿವ ಶ್ರೀಮಂತ ಪಾಟೀಲ ಭಾವಚಿತ್ರ ಸುಟ್ಟು ಕರವೇ ಪ್ರತಿಭಟನೆ

ಬೆಳಗಾವಿ:ಕನ್ನಡ ವಿರೋಧಿ ನಿಲುವು : ಸಚಿವ ಶ್ರೀಮಂತ ಪಾಟೀಲ ಭಾವಚಿತ್ರ ಸುಟ್ಟು ಕರವೇ ಪ್ರತಿಭಟನೆ 

ಕನ್ನಡ ವಿರೋಧಿ ನಿಲುವು : ಸಚಿವ ಶ್ರೀಮಂತ ಪಾಟೀಲ ಭಾವಚಿತ್ರ ಸುಟ್ಟು ಕರವೇ ಪ್ರತಿಭಟನೆ

 

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 4 :

 

ಕನ್ನಡ ವಿರೋಧಿ ನಿಲುವನ್ನು ತೋರಿದ ಜವಳಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿ ಬೆಳಗಾವಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿದರು

ಮಂಗಳವಾರದಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸೇರಿದ ಕರವೇ ಕಾರ್ಯಕರ್ತರು ನಾಡ ವಿರೋಧಿ ನಿಲುವು ತಾಳಿದ ಸಚಿವ ಶ್ರೀಮಂತ ಪಾಟೀಲ ಅವರ ಭಾವಚಿತ್ರವನ್ನು ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.

ಗಡಿ ಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅತ್ಯಂತ ಸೌರ್ಹಾಧ್ಯತೆಯಿಂದ ಬದುಕುತ್ತಿರುವ ಸಂದರ್ಭದಲ್ಲಿ ಸಚಿವರು ಕನ್ನಡಿಗರಿಗೆ ಅವಮಾನ ಮಾಡಿ ಮರಾಠಿ ಭಾಷೆಯಲ್ಲಿ ಮಾತನಾಡಿ ಮರಾಠಿ ಬ್ಯಾನರ್ ಅಳವಡಿಸಿ ಕನ್ನಡವನ್ನು ಮತ್ತು ಕನ್ನಡಿಗರನ್ನು ಅವಮಾನಿಸಿ, ಗಡಿ ಭಾಗದಲ್ಲಿ ಕನ್ನಡವನ್ನು ಬಿಟ್ಟು ಮರಾಠಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬರುತ್ತಿದ್ದಾರೆ.
ಆದ ಕಾರಣ ಕನ್ನಡ ನೆಲ ಜಲ ಬಗ್ಗೆ ಅತ್ಯಂತ ಪ್ರೇಮ ಮತ್ತು ಕಳಕಳಿಯನ್ನು ಹೊಂದಿರುವ ಮುಖ್ಯಮಂತ್ರಿಗಳು ತಕ್ಷಣ ಸಚಿವ ಶ್ರೀಮಂತ ಪಾಟೀಲ ಅವರನ್ನು ತಮ್ಮ ಸಂಪುಟದಿಂದ ಕೈ ಬಿಡಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಮಹಾದೇವ ತಳವಾರ , ಸುರೇಶ ಗವನ್ನವರ , ನಿಂಗರಾಜ ಗುಂಡ್ಯಾಗೋಳ ಸೇರಿದಂತೆ ಇತರರು ಇದ್ದರು…

Related posts: