RNI NO. KARKAN/2006/27779|Friday, May 17, 2024
You are here: Home » breaking news » ಗೋಕಾಕ:ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ

ಗೋಕಾಕ:ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ 

ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ
ಗೋಕಾಕ ಸೆ 13: ಹುಣಶ್ಯಾಳ ಪಿಜಿ ಗ್ರಾಮವನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಹುಣಶ್ಯಾಳ ಪಿಜಿ ಗ್ರಾಮಸ್ಥರು ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ಮನವಿ ಅರ್ಪಿಸಿದರು.

ಹುಣಶ್ಯಾಳ ಪಿಜಿ ಗ್ರಾಮವನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ನಮಗೆ ತೊಂದರೆ ಆಗುತ್ತದೆ. ನಮ್ಮೆಲ್ಲ ಕೆಲಸ ಕಾರ್ಯಗಳು ಕೇವಲ 16 ಕಿ.ಮೀ ದೂರದಲ್ಲಿರುವ ಗೋಕಾಕ ಅತ್ಯಂತ ಯೋಗ್ಯವಾಗಿದೆ ಮೂಡಲಗಿಗೆ ನಾವು ಹೋಗುವುದಿಲ್ಲ. ನಮ್ಮನ್ನು ಯಾವುದೇ ಕಾರಣಕ್ಕೂ ಮೂಡಲಗಿಗೆ ಸೇರಿಸಬೇಡಿ. ನಮಗೆ ಗೋಕಾಕ ತಾಲೂಕಿನಲ್ಲಿ ಮುಂದುವರೆಯಲ್ಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ
ಉಪತಹಶೀಲದಾರ ಎಸ್.ಕೆ.ಕುಲಕರ್ಣಿ ಅವರು ಮನವಿ ಸ್ವೀಕರಿಸಿ ಗ್ರಾಮಸ್ಥರ ಭಾವನೆಗಳನ್ನು ಸರಕಾರಕ್ಕೆ ತಿಳಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹುಣಶ್ಯಾಳ ಪಿಜಿ ತಾ.ಪಂ ಸದಸ್ಯ ಬಸವರಾಜ ಹುಕ್ಕೇರಿ , ಹುಣಶ್ಯಾಳ ಪಿಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಹುಕ್ಕೇರಿ , ಸದಸ್ಯರಾದ ಶಂಕರ ಇಂಚಲ , ಬಸಗೌಡ ನಾಯಿಕ ಗ್ರಾಮದ ಮುಖಂಡರಾದ ಅವ್ವಣಾ ಡಬ್ಬನವರ , ನಿಜಾಮ ನಧಾಪ , ರಾಮನಾಯಿಕ ನಾಯಿಕ , ಬಸವರಾಜ ಕಾಡಾಪೂರ , ನಿಜಗುಣಿ ಅಥಣಿ , ಹನುಮಂತ ಶೆಕ್ಕಿ , ಬಾಳಪ್ಪ ನೇಸರಗಿ , ಬಸವರಾಜ ನನ್ನಾರಿ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: