RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಸೇವಾ ಭದ್ರತೆ ನೀಡಿಲ್ಲವೆಂದು ಆರೋಪಿಸಿ ಸಾರ್ವಜನಿಕ ಆಸ್ಪತ್ರೆಯ ಹೊರ ಗುತ್ತಿಗೆ ಮತ್ತು ಡಿ.ಗ್ರೂಪ್ ನೌಕರರ ದಿಢಿರ ಪ್ರತಿಭಟನೆ

ಗೋಕಾಕ:ಸೇವಾ ಭದ್ರತೆ ನೀಡಿಲ್ಲವೆಂದು ಆರೋಪಿಸಿ ಸಾರ್ವಜನಿಕ ಆಸ್ಪತ್ರೆಯ ಹೊರ ಗುತ್ತಿಗೆ ಮತ್ತು ಡಿ.ಗ್ರೂಪ್ ನೌಕರರ ದಿಢಿರ ಪ್ರತಿಭಟನೆ 

ಸೇವಾ ಭದ್ರತೆ ನೀಡಿಲ್ಲವೆಂದು ಆರೋಪಿಸಿ ಸಾರ್ವಜನಿಕ ಆಸ್ಪತ್ರೆಯ ಹೊರ ಗುತ್ತಿಗೆ ಮತ್ತು ಡಿ.ಗ್ರೂಪ್ ನೌಕರರ ದಿಢಿರ ಪ್ರತಿಭಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 3 :

 

ಕಳೆದ 6 ತಿಂಗಳನಿಂದ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರಿಗೆ ವೇತನ ಪಾವತಿ ಮಾಡಲಾಗಿಲ್ಲ. ಕೊರೊನಾ ವಾರ್ಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಈ ಗುತ್ತಿಗೆ ಕಾರ್ಮಿಕರಿಗೆ ಯಾವುದೇ ರೀತಿಯ ಸೇವಾ ಭದ್ರತೆಯನ್ನು ನೀಡಿಲ್ಲವೆಂದು ಆರೋಪಿಸಿ ನಗರದ ಸಾರ್ವಜನಿಕ ಆಸ್ಪತ್ರೆಯ ಹೊರ ಗುತ್ತಿಗೆ ಮತ್ತು ಡಿ.ಗ್ರೂಪ್ ನೌಕರರು ಸೋಮವಾರದಂದು ದಿಢಿರನೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಶೀಘ್ರ ವೇತನ ಪಾವತಿಸುವಂತೆ ಆಗ್ರಹಿಸಿದರು.
ಆಸ್ಪತ್ರೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಒಂದು ವಾರದ ಹಿಂದೆ ಇದರಲ್ಲಿ ಓರ್ವ ಗುತ್ತಿಗೆ ನೌಕರನಿಗೆ ಕೊರೋನಾ ಸೋಂಕು ದೃಡಪಟ್ಟಿತ್ತು, ಇತನು ಸಹ ಇಂದು ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಸ್ಪತ್ರೆಯ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಎನ್ನಲಾಗುತ್ತಿದೆ.
ಇದರ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ ಅವರನ್ನು ಸಂರ್ಪಕಿಸಿದಾಗ ಅದನ್ನು ಅಲ್ಲಗೆಳೆದಿರುವ ಅವರು, ಸೃಷ್ಟನೆ ನೀಡಿ, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲ ನೌಕರರಿಗೆ 6 ತಿಂಗಳ ವೇತನವಲ್ಲ 3 ತಿಂಗಳ ವೇತನ ಬಾಕಿ ಇತ್ತು ಈಗಾಗಲೆ 1 ತಿಂಗಳ ವೇತನ ಪಾವತಿಸಲು ಕ್ರಮ ಜರುಗಿಸಲಾಗಿದೆ. ಇನ್ನು ಬಾಕಿ ಉಳಿದಿರುವ 2 ತಿಂಗಳ ವೇತನವನ್ನು ಬರುವ 1 ತಿಂಗಳ ವೇತನ ನೀಡಲಾಗಿದೆ ಬಾಕಿ ಉಳಿದ 2 ತಿಂಗಳ ವೇತನವನ್ನು 2 ದಿನದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಡಾ.ರವೀಂದ್ರ ಅವರು ಪಾಸಿಟಿವ್ ವರದಿ ಬಂದ ಗುತ್ತಿಗೆ ನೌಕರ ಗುಣಮುಖ ಹೊಂದಿದ್ದ ಕಾರಣ ಇಂದು ಅವನನ್ನು ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಇತನು ಯಾವುದೇ ಆತ್ಮಹತ್ಯೆಗೆ ಪ್ರಯತ್ತಿಸಿಲ್ಲ, ಆತನಿಗೆ ಇರಲು ಆಸ್ಪತ್ರೆಯ ಮೇಲ್ಬಾಗದಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು. ಬದಲಿಗೆ ಅವನ ಮನೆ ಸುತ್ತಮುತ್ತ ಸಿಲ್ಡೌನ ಮಾಡಲು ತೆರಳಿದ್ದ ನಗರಸಭೆ ಸಿಬ್ಬಂದಿ ಒಬ್ಬರಿಗೆ ಪೋನ ಮಾಡಿ ನಮ್ಮ ವೇತನ ಆಗಿಲ್ಲ, ನೀವು ಸಿಲ್ಡೌನ ಮಾಡಿದರೆ ನಾನು ಆಸ್ಪತ್ರೆಯ ಮೇಲಿನಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸೃಷ್ಟಪಡಿಸಿದರು.

Related posts: