RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ

ಗೋಕಾಕ:ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ 

ಮುರುಘರಾಜೇಂದ್ರ ಶ್ರೀಗಳು ಗೋಕಾಕ ಭಾಗದ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ : “ಮಾತೃ ಹೃದಯಿ” ಗ್ರಂಥ ಬಿಡುಗಡೆ ಗೋಳಿಸಿದ ಡಾ. ಸಿದ್ಧರಾಮ ಮಹಾಸ್ವಾಮಿಜಿ ಅಭಿಮತ

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಫೆ 2 :
ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕವಾಗಿ ಸಮಾಜವನ್ನು ಸದೃಢಗೊಳಿಸುವಲ್ಲಿ ಶ್ರಮಿಸುತ್ತಿರುವ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರು ಈ ಭಾಗದ ಒಂದು ದೊಡ್ಡ ನೈತಿಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಎಡೆಯೂರು ಡಂಬಳ-ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಜಿಯವರು ಹೇಳಿದರು.
ಅವರು ಶುಕ್ರವಾರದಂದು ಸಂಜೆ ಜರುಗಿದ ಶರಣ ಸಂಸ್ಕøತಿ ಉತ್ಸವ ಸಮಾರಂಭದಲ್ಲಿ ಪತ್ರಕರ್ತ ಸಾಧಿಕ ಹಲ್ಯಾಳ ಸಂಪಾದಕತ್ವದಲ್ಲಿ ಮೂಡಿಬಂದಿರುವ “ಮಾತೃ ಹೃದಯಿ” ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಅಭಿನಂದನ ಗ್ರಂಥವು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪೂಜ್ಯ ಮುರಘರಾಜೇಂದ್ರ ಶ್ರೀಗಳಿಗೆ ಗುರು ವಂದನೆ ಸಲ್ಲಿಸುತ್ತಿರುವದು

ಈ ಅಭಿನಂದನ ಗ್ರಂಥವು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ಪಟ್ಟಾಧಿಕಾರ ಮಹೋತ್ಸವದ 15 ವರ್ಷದ ಸಾರ್ಥಕ ಸಾಧನ ಸಂಭ್ರಮದ ಸವಿನೆನಪಿಗಾಗಿ ಬಿಡುಗಡೆಗೊಂಡಿರುವುದು ಶ್ಲಾಘನೀಯ ವಿಷಯವಾಗಿದೆ. ಶ್ರೀಗಳು ನಿಜಕ್ಕೂ ಮಾತೃ ಹೃದಯವಂತರು. ಈ ಗ್ರಂಥದಲ್ಲಿ ಶ್ರೀಗಳ ಸಾಧನೆ. ಜೀವನ ಚರಿತ್ರೆ, ಸಾಮಾಜಿಕ,ಧಾರ್ಮಿಕತೆಯ ಕಾರ್ಯ ಹೀಗೆ ಹಲವಾರು ವಿಚಾರ ಚಿಂತನೆಗಳು ಒಳಗೊಂಡಿವೆ. ಸಂಪಾದಕ ಸಾಧಿಕ ಹಲ್ಯಾಳ ಅವರ ಈ ಗ್ರಂಥವು ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು.
ವೇದಿಕೆ ಮೇಲೆ ಹೊಸದಿಲ್ಲಿಯ ಹಜರತ ಅಖದಸ್ ಮೌಲಾನಾ ಚತುರ್ವೇದಿ ಮಹಫುಜುರ ರಹಮಾನ ಶಾಹೀನ ಜಮಾಲಿ ಸಾಹಬ, ಶ್ರೀಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರು, ಸಂಪಾದಕ ಸಾಧಿಕ ಹಲ್ಯಾಳ, ಬಸವರಾಜ ಖಾನಪ್ಪನವರ, ಜಯಾನಂದ ಮಾದರ, ಕೃಷ್ಣಾ ಖಾನಪ್ಪನವರ, ಉಮೇಶ ಬಾಳಿ, ಅಬ್ದುಲ್‍ರಹಮಾನ ಅಲ್ಲಾಭಕ್ಷ ಶೇಖ ಮೌಲಾನಾ ಬಶೀರುಲ್-ಹಕ್ ಸಾಹನಕಾಸ್ಮಿ, ಜಾವೇದ ಗೋಕಾಕ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಬಸವರಾಜ ಕಪರಟ್ಟಿ ಸ್ವಾಮಿಜಿ, ತಮ್ಮಣ್ಣ ಕೆಂಚರಡ್ಡಿ, ಸಂಜು ಚಿಪ್ಪಲಕಟ್ಟಿ, ಬಸನಗೌಡ ಪಾಟೀಲ, ಶಂಕರ ಬೆಳಕೂಡ, ಮಲ್ಲಿಕಾರ್ಜುನ ಈಟಿ, ಮಹಾಂತೇಶ ತಾಂವಶಿ, ಸಿದಗೌಡ ಪಾಟೀಲ ಉಪಸ್ಥಿತರಿದ್ದರು.

Related posts: