RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಬಾಂಧಾರ-ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂಗಳ ಕಾಮಗಾರಿಗಳು ಮಂಜೂರು : ಸಚಿವ ರಮೇಶ

ಗೋಕಾಕ:ಬಾಂಧಾರ-ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂಗಳ ಕಾಮಗಾರಿಗಳು ಮಂಜೂರು : ಸಚಿವ ರಮೇಶ 

ಬಾಂಧಾರ-ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂಗಳ ಕಾಮಗಾರಿಗಳು ಮಂಜೂರು : ಸಚಿವ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 25 :

 

ಲೋಕೋಪಯೋಗಿ ಇಲಾಖೆಯಿಂದ ಅಲ್ಪ-ಸಂಖ್ಯಾತರ ಕಾಲೋನಿಗಳ ಅಭಿವೃದ್ದಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂಧಾರ-ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂಗಳ ಕಾಮಗಾರಿಗಳನ್ನು ಗೋಕಾಕ ಮತಕ್ಷೇತ್ರಕ್ಕೆ ಮಂಜೂರಾಗಿದ್ದು ಕಾಮಗಾರಿಗಳನ್ನು ಪ್ರಾರಂಭಿಸಲಾಗವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಶಿಂಗಳಾಪೂರ ಹಾಗೂ ಠಕ್ಕೆಯಲ್ಲಿ 35 ಲಕ್ಷ, ಶಿಂದಿಕುರಬೇಟ 30 ಲಕ್ಷ, ಧುಪದಾಳ 25 ಲಕ್ಷ, ಮಮದಾಪೂರ 35 ಲಕ್ಷ, ಮಕ್ಕಳಗೇರಿ, 20 ಲಕ್ಷ, ಹೂಲಿಕಟ್ಟಿ 20 ಲಕ್ಷ, ಅಕ್ಕತಂಗೇರಹಾಳ 20ಲಕ್ಷ, ಅಂಕಲಗಿ 40ಲಕ್ಷ, ಕುಂದರಗಿ, 40 ಲಕ್ಷ ರೂಗಳಲ್ಲಿ ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ಬೆಣಚಿನಮರಡಿ(ಕೊ) 1.80 ಕೋಟಿ, ಗುಜನಟ್ಟಿ 1.50 ಕೋಟಿ, ಕೈತನಾಳ ಹೊಸುರ 2 ಕೋಟಿ, ಅಕ್ಕತಂಗೇರಹಾಳ 2ಕೋಟಿ, ಸುಲಧಾಳ 2ಕೋಟಿ, ದಾಸನಟ್ಟಿ 2ಕೋಟಿ, ಹಿರೇನಂದಿ 1.50ಕೋಟಿ, ಮಕ್ಕಳಗೇರಿ 2ಕೋಟಿ ರೂಗಳಲ್ಲಿ ಬಾಂಧಾರ-ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: