ಗೋಕಾಕ:ಕೊಣ್ಣೂರ ಗ್ರಾಮದ 2 ಮತ್ತು ಮೂಡಲಗಿಯ ಸಿದ್ದಾಪುರ ಹಟ್ಟಿ ಗ್ರಾಮದ ಒರ್ವಮಹಿಳೆಗೆ ಕೊರೋನಾ ದೃಢ : ಡಾ ಜಗದೀಶ
ಕೊಣ್ಣೂರ ಗ್ರಾಮದ 2 ಮತ್ತು ಮೂಡಲಗಿಯ ಸಿದ್ದಾಪುರ ಹಟ್ಟಿ ಗ್ರಾಮದ ಒರ್ವಮಹಿಳೆಗೆ ಕೊರೋನಾ ದೃಢ : ಡಾ ಜಗದೀಶ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 19 :
ತಾಲೂಕಿನ ಕೊಣ್ಣೂರ ಗ್ರಾಮದ ಇಬ್ಬರಿಗೆ ಮತ್ತು ಮೂಡಲಗಿ ತಾಲೂಕಿನ ಸಿದ್ದಾಪುರ ಹಟ್ಟಿ ಗ್ರಾಮದ ಒರ್ವ ಮಹಿಳೆಗೆ ರವಿವಾರದಂದು ಕೊರೋನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ .
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಕಳೆದ ಹದಿನೈದು ದಿನಗಳ ಹಿಂದೆ ಸಕ್ಕರೆ ಕಾಯಿಲೆ ಹಾಗೂ ಕೊರೋನಾ ಸೋಂಕಿನಿಂದ ಮೃತಪಟ್ಟ ಕೊಣ್ಣೂರ ಗ್ರಾಮದ ವೃದ್ದೆಯ ಮಕ್ಕಳಿಬ್ಬರಿಗೆ ಮತ್ತು ಮೂಡಲಗಿ ತಾಲೂಕಿನ ಸಿದ್ದಾಪುರ ಹಟ್ಟಿ ಗ್ರಾಮದ ಹಿಂಡಲಗಾ ಜೈಲಿನಲ್ಲಿರುವ ಮಹಿಳೆಯೋರ್ವಳಿಗೆ ಕೊರೋನಾ ಸೋಂಕು ದೃಢಪಟ್ಟದ್ದು, ಸಿದ್ದಾಪುರ ಹಟ್ಟಿ ಗ್ರಾಮದ ಸೋಂಕಿತ ಮಹಿಳೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗುವದು ಮತ್ತು ಈಗಾಗಲೇ ಗೋಕಾಕ ನಗರದಲ್ಲಿ ಕ್ವಾರಂಟೈನ ಆಗಿರುವ ಕೊಣ್ಣೂರ ಗ್ರಾಮದ ಇಬ್ಬರನ್ನು ಗೋಕಾಕದಲ್ಲಿ ತೆರೆಯಲಾದ ಕೋವಿಡ್ ಕೇರ ವಾರ್ಡಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.