RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸೊಂಕಿತರೊಂದಿಗೆ ಸಂಪರ್ಕ ಸಾಧಿಸಿದವರು ಕೂಡಲೇ ಚಿಕಿತ್ಸೆಗೆ ಒಳಗಾಗಿ : ನಾಗಪ್ಪ ಶೇಖರಗೋಳ ಮನವಿ

ಗೋಕಾಕ:ಸೊಂಕಿತರೊಂದಿಗೆ ಸಂಪರ್ಕ ಸಾಧಿಸಿದವರು ಕೂಡಲೇ ಚಿಕಿತ್ಸೆಗೆ ಒಳಗಾಗಿ : ನಾಗಪ್ಪ ಶೇಖರಗೋಳ ಮನವಿ 

ಸೊಂಕಿತರೊಂದಿಗೆ ಸಂಪರ್ಕ ಸಾಧಿಸಿದವರು ಕೂಡಲೇ ಚಿಕಿತ್ಸೆಗೆ ಒಳಗಾಗಿ : ನಾಗಪ್ಪ ಶೇಖರಗೋಳ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

 

 

ಸೊಂಕಿತರೊಂದಿಗೆ ಸಂಪರ್ಕ ಸಾಧಿಸಿದವರು ಕೂಡಲೇ ಚಿಕಿತ್ಸೆಗೆ ಒಳಗಾಗಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು

ದುರದುಂಡಿ ಗ್ರಾಮದಲ್ಲಿ ಗುರುವಾರದಂದು ಜರುಗಿದ ಟಾಸ್ಕಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಹಿನ್ನೆಲೆಯಲ್ಲಿ ದುರದುಂಡಿ ಗ್ರಾಮದಲ್ಲಿ ಸಭೆಯನ್ನು ಕರೆಯಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಸಭೆ ಕರೆದಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಉಪಯೋಗಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೋನಾ ತಡೆಗಟ್ಟಲು ಇದೊಂದೇ ನಮ್ಮ ಬಳಿ ಇರುವ ಮಾರ್ಗ ಎಂದು ಹೇಳಿದರು. ಸೊಂಕಿತರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಸ್ವಯಂ ಪ್ರೇರಿತರಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕು. ಈ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿಯೇ ಭಯಂಕರ ರೋಗವಾಗಿದೆ ಎಂದು ಹೇಳಿದರು.

Related posts: