RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಗೋಕಾಕ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ದೃಢ : ಡಾ.ಜಗದೀಶ ಜಿಂಗಿ ಮಾಹಿತಿ

ಗೋಕಾಕ:ಗೋಕಾಕ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ದೃಢ : ಡಾ.ಜಗದೀಶ ಜಿಂಗಿ ಮಾಹಿತಿ 

ಗೋಕಾಕ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ದೃಢ : ಡಾ.ಜಗದೀಶ ಜಿಂಗಿ ಮಾಹಿತಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 :

 

ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರದಂದು ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ಧು, ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರ-2, ಕೌಜಲಗಿ-7, ಮೂಡಲಗಿ-1, ರಾಜಾಪೂರ-1 ಮತ್ತು ದುರದುಂಡಿ-1 ಒಟ್ಟು 12 ಪ್ರಕರಣ ಕೊರೋನಾ ವೈರಸ್ ದೃಡಪಟ್ಟಿದ್ದು, ಸೋಂಕಿತರು ವಾಸಿಸುವ ಮನೆಗಳ ಸುತ್ತಮುತ್ತಲಿನ 50 ಮೀಟರ ಪ್ರದೇಶವನ್ನು ಸಿಲ್‍ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಗರದ ಕುರುಬರ ಪೂಲ್ ಹತ್ತಿರವಿರುವ ಓಣಿಯೊಂದರ ಅಸ್ತಮಾ ರೋಗದಿಂದ ಬಳಲುತ್ತಿದ 48 ವರ್ಷದ ಮಹಿಳೆಯೊರ್ವಳು ಚಿಕಿತ್ಸೆ ಫಲಕಾರಿಯಾಗದೇ 10 ದಿನಗಳ ಹಿಂದೆ ಮೃತಪಟ್ಟಿದ್ದಳು. ಈಗ ವರದಿ ಬಂದಿದೆ. ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಹೊಮ್‍ಕ್ವಾರಂಟನ್‍ನಲ್ಲಿ ಇರಲು ತಿಳಿಸಿಲಾಗಿದೆ ಎಂದು ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿಯ ಅಂಬೇಡ್ಕರ ನಗರದ 64 ವರ್ಷದ ವೃದ್ದನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವ್ಯ ನಡೆಸಿದ ನಂತರ ಸೋಂಕು ದೃಢಪಟ್ಟಿದೆ. ಕೌಜಲಗಿ ಗ್ರಾಮದ ಕೆಲ ದಿನಗಳ ಹಿಂದೆ ಕೋರೋನಾ ಸೋಂಕಿತೆ ಬಾಲಕಿಯ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದ 33 ವ್ಯಕ್ತಿಗಳನ್ನು ನಗರದಲ್ಲಿ ಕ್ವಾರಂಟನ್‍ನಲ್ಲಿಟ್ಟು ಗಂಟಲು ದ್ರವ್ಯವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ. ದುರದುಂಡಿ ಗ್ರಾಮದ ಪ್ರಕರಣವು ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ರಾಜಾಪೂರದ ಆರ್‍ಎಮ್‍ಪಿ ವೈದ್ಯ ಹಾಗೂ ಮೂಡಲಗಿ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇರುವದಿಲ್ಲ, ಸಮುದಾಯದಿಂದ ಹಬ್ಬಿದೆ ಎಂದು ತಿಳಿಸಿದ್ದಾರೆ.
ಲಕ್ಷಣ ರಹಿತ ಮತ್ತು ಸಾಮಾನ್ಯ ಲಕ್ಷಣ ಹೊಂದಿದ್ದವರನ್ನು ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ನಗರದ ದೇವರಾಜ ಅರಸ ಹಾಸ್ಟೆಲ್‍ನ 5 ಕೊಠಡಿಗಳಲ್ಲಿ ಚಿಕಿತ್ಸೆ ನೀಡಲು ತಯ್ಯಾರು ಮಾಡಿಕೊಳ್ಳಲಾಗಿದೆ. ಕೋರೊನಾದಿಂದ ತೀವ್ರ ತೊಂದರೆ ಇರುವವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುವದು ಎಂದು ಡಾ. ಜಿಂಗಿ ತಿಳಿಸಿದ್ದಾರೆ.

Related posts: