ಬೆಳಗಾವಿ:ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ
ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ
ಬೆಳಗಾವಿ ಅ 27:ಬೆಳಗಾವಿಯಲ್ಲಿ ಮೋನ್ನೆಯಷ್ಟೇ ನಡೆದ ಲಿಂಗಾಯತ ಸಮಾವೇಶದ ಬೆನ್ನಲೆ ಈಗ ಬೃಹತ್ ವಾಲ್ಮಿಕಿ ಸಮಾವೇಶ ಬೆಳಗಾವಿಯಲ್ಲಿ ನಡೆಯಲಿದೆ. ಎಐಸಿಸಿ ಕಾರ್ಯದರ್ಶಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕೆಲವೇ ದಿನಗಳಲ್ಲಿ ವಾಲ್ಮೀಕಿ ಜನಾಂಗದ ಸಮಾವೇಶ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಯುವ ಪಡೆಯ ಜಿಲ್ಲಾಧ್ಯಕ್ಷ ಸಂತೋಷ ಖಂಡ್ರಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಾಲ್ಮೀಕಿ ಸಮಾಜದಲ್ಲಿ ಹೆಚ್ಚು ಜನರು ಇದ್ದು, ಇತ್ತಿತ್ತಲಾಗಿ ನಾಯಕ ಸಮಾಜದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಿಜವಾದ ನಾಯಕ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲು ನಾಯಕರ ಯುವ ಪಡೆ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ ಮೊದಲು ಬೆಂಗಳೂರಲ್ಲಿ ಸಮಾವೇಶ ನಡೆಸಿ, ಬೆಳಗಾವಿಯಲ್ಲಿ ಎರಡನೇ ಬೃಹತ್ ವಾಲ್ಮೀಕಿ ಸಮಾವೇಶ ನಡೆಸಲಾಗುವುದು ಎಂದು ಸಂತೋಷ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಗದೀಶ ಹುಲ್ಯಾಳ, ಮಾರುತಿ ಜಲಾಳೆ, ಮಹಾದೇವ ದೊಡಮನಿ, ಭರಮೇಶ ಪೊಲೀಸ್ ಇತರರು ಉಪಸ್ಥಿತರಿದ್ದರು