RNI NO. KARKAN/2006/27779|Monday, February 17, 2025
You are here: Home » breaking news » ಘಟಪ್ರಭಾ:ಘಟಪ್ರಭಾ ಬಸವ ನಗರದ ಇಬ್ಬರಿಗೆ ಸೋಂಕು ಪತ್ತೆ : ಸಾರ್ವಜನಿಕರಲ್ಲಿ ಆತಂಕ

ಘಟಪ್ರಭಾ:ಘಟಪ್ರಭಾ ಬಸವ ನಗರದ ಇಬ್ಬರಿಗೆ ಸೋಂಕು ಪತ್ತೆ : ಸಾರ್ವಜನಿಕರಲ್ಲಿ ಆತಂಕ 

ಘಟಪ್ರಭಾ ಬಸವ ನಗರದ ಇಬ್ಬರಿಗೆ ಸೋಂಕು ಪತ್ತೆ : ಸಾರ್ವಜನಿಕರಲ್ಲಿ ಆತಂಕ

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜು 1 :

 

ಗೋಕಾಕ ತಾಲೂಕಿ ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವ ನಗರದಲ್ಲಿ ಇಬ್ಬರಿಗೆ ಬುಧವಾರ ಕೊರೋನಾ ಸೊಂಕು ಪತ್ತೆಯಾಗಿದೆ.
ಬಸವ ನಗರದ ನಿವಾಸಿ 41 ವರ್ಷದ ವ್ಯಕ್ತಿ ಹಾಗೂ ಆತನ 10 ವರ್ಷದ ಮಗನಿಗೆ ಸೋಂಕು ತಗುಲಿದ್ದು, ಇವರು ಜೂನ 21 ರಂದು ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣಕ್ಕೆ ಸಂಬಂದಿಕ ಮಹಿಳೆಯ ಆರೋಗ್ಯ ವಿಚಾರಿಸಲು ಹೋಗಿ ಬಂದಿದ್ದರು.
ಮರುದಿನ ಆ ಮಹಿಳೆಗೆ ಕೊರೋನಾ ಸೊಂಕು ದೃಡವಾಗಿದೆ. ಸೊಂಕಿತನ ಟ್ರಾವಲ ಹಿಸ್ಟ್ರಿಯಲ್ಲಿ ಘಟಪ್ರಭಾದ ಇಬ್ಬರು ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ಸೊಂಕಿತರು ಸೇರಿದಂತೆ ಮನೆಯಲ್ಲಿನ ಒಟ್ಟು ಆರು ಜನರನ್ನು ಎರಡು ದಿನಗಳ ಹಿಂದೆ ಕ್ವಾರಂಟೈನ ಮಾಡಲಾಗಿತ್ತು. ಅದರಲ್ಲಿ ಇಬ್ಬರಿಗೆ ಇಂದು ಕೊರೋನಾ ಪಾಸಿಟೀವ ಬಂದಿದೆ.
ಸೊಂಕಿತರ ಮನೆಯ 50 ಮೀ ಪ್ರದೇಶವನ್ನು ಗುರುತಿಸಿ ತಾಲೂಕಾಡಳಿತದಿಂದ ಸೀಲ್ ಡೌನ ಮಾಡಲಾಗಿದೆ. ಸೊಂಕಿತರ ಮನೆ ಹಾಗೂ ಸುತ್ತಲಿನ ಪ್ರದೇಶವನ್ನು ಸೆನಿಟೈಜ್‍ರಗೊಳಿಸಿ ಡಿ.ಡಿ.ಟಿ. ಪಾವಡರ ಸಿಂಪಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಷ್ಟು ದಿನಗಳ ಘಟಪ್ರಭಾ ಪಟ್ಟಣ ಕೊರೋನಾ ಮಹಾ ಮಾರಿಯಿಂದ ಮುಕ್ತವಾಗಿತ್ತು ಈಗ ಹೆಮ್ಮಾರಿ ಘಟಪ್ರಭಾಕೂ ಕಾಲಿಟ್ಟಿದ್ದು ಸುತ್ತ ಮುತ್ತಲಿನ ಜನರ ನಿದ್ದೆಗೆಡಿಸಿದೆ.

ಮಾಹಿತಿ ಬಂದ ಕೂಡಲೇ ಸೊಂಕಿತರನ್ನು ಕ್ವಾರಂಟೈನ್ ಮಾಡಿ ಅವರನ್ನು ಕೋವಿಡ-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟೀವ ಬಂದ ನಂತರ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಪ್ರಕಾಶ ಹೊಳೆಪ್ಪನವರ, ತಹಶೀಲ್ದಾರರು ಗೋಕಾಕ

ಘಟಪ್ರಭಾದ ಇಬ್ಬರು ಸೋಂಕಿತರ ಸಂಪರ್ಕಕ್ಕೆ ಬಂದಿರುವ ಇನ್ನೂ ನಾಲ್ಕು ಜನರ ವರದಿ ಬರುವ ಬಾಕಿ ಇದೆ. ಈಗಾಗಲೇ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆನರು ಸರ್ಕಾರದ ಆದೇಶಗಳನ್ನು ಪಾಲಿಸಬೇಕು.

ಡಾ.ಪ್ರವೀನ ಕರಗಾವಿ, ವೈದ್ಯಾಧಿಕಾರಿಗಳು ಶಿಂದಿಕುರಬೇಟ

Related posts: