ಗೋಕಾಕ:ಸಂಪೂರ್ಣ ಜಲಾವೃತಗೊಂಡ ಮೆಳವಂಕಿ ಗ್ರಾಮ : ಮಾಹಾ ಪ್ರವಾಹಕ್ಕೆ ಸಿಲುಕಿದ 100 ಕ್ಕೂ ಹೆಚ್ಚು ಸಾರ್ವಜನಿಕರು

ಸಂಪೂರ್ಣ ಜಲಾವೃತಗೊಂಡ ಮೆಳವಂಕಿ ಗ್ರಾಮ : ಮಾಹಾ ಪ್ರವಾಹಕ್ಕೆ ಸಿಲುಕಿದ 100 ಕ್ಕೂ ಹೆಚ್ಚು ಸಾರ್ವಜನಿಕರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 7 :
ಹಿಂದೆಂದಿಗೂ ಕಂಡ ಕಾಣಲಾದ ಮಹಾ ಪ್ರವಾಹಕ್ಕೆ ಭಾಗಶಃ ಗೋಕಾಕ ತಾಲೂಕು ಸಂಪೂರ್ಣ ಜಲಾವೃತಗೊಂಡಿದೆ. ಗೋಕಾಕ ತಾಲೂಕಿನ ಅರಭಾವಿ ಕ್ಷೇತ್ರದ ಮೆಳವಂಕಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು , ನೂರಕ್ಕೆ ಹೆಚ್ಚು ಗ್ರಾಮಸ್ಥರು ನಡುನೀರಿನಲ್ಲಿ ಸಿಲುಕ್ಕಿದ್ದಾರೆ.
ಈಗಾಗಲೇ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾಡಳಿತಕ್ಕೆ ಹಡಗಿನ ವ್ಯವಸ್ಥೆ ಮಾಡಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸೂಚಿಸಿದ್ದು , ಅಧಿಕಾರಿಗಳು ಕಾರ್ಯಪ್ರವೃತವಾಗಿದ್ದಾರೆ.