ಗೋಕಾಕ:ಅತಿಥಿ ಶಿಕ್ಷಕರು ಮತ್ತು ಖಾಸಗಿ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಪ್ಯಾಕೇಜ್ ಕ್ಕಾಗಿ ಆಗ್ರಹಿಸಿ ಮನವಿ
ಅತಿಥಿ ಶಿಕ್ಷಕರು ಮತ್ತು ಖಾಸಗಿ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಪ್ಯಾಕೇಜ್ ಕ್ಕಾಗಿ ಆಗ್ರಹಿಸಿ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 26 :
ಅತಿಥಿ ಶಿಕ್ಷಕರು ಮತ್ತು ಖಾಸಗಿ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವೃತ್ತಿಪರ ಶಿಕ್ಷಣ
ಪದವೀಧರರ ಸಂಘದ ಪದಾಧಿಕಾರಿಗಳು ಮಂಗಳವಾರದಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು
ಸರಕಾರವು, ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿಯೂ ಸರಕಾರಿ ನೌಕರಸ್ಥರಿಗೆ ವೇತನ ನೀಡುತ್ತಿದ್ದು, ಅದೇ ರೀತಿ ಕಾರ್ಮಿಕರಿಗೆ, ಆಟೊ-ಟ್ಯಾಕ್ಸಿ ಚಾಲಕರಿಗೆ, ರೈತರಿಗೆ ಜೀವನೋಪಾಯ ಪ್ಯಾಕೇಜ್ ನೀಡಿದ್ದು ಸಂತೋಷ ವಿಷಯ.
ಅದರಂತೆ ವರ್ಷಪೂರ್ತಿ 8-10 ಸಾವಿರು ರೂಪಾಯಿ ಹಣದಲ್ಲಿ ಜೀವನ ಸಾಗಿಸುವ ಮತ್ತು ಸರಕಾರಿ ನೌಕರರಷ್ಟೇ ಕೆಲಸ ಮಾಡುವ ಖಾಸಗಿ ಶಾಲೆಯ ಹಾಗೂ ಖಾಸಗಿ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಹಾಗೂ ಅತಿಥಿ ಶಿಕ್ಷಕರಿಗೆ, ಕೊರೊನಾ ವೈರಸ್ ಮಹಾಮಾರಿಯ ಸಂಕಷ್ಟದ ಈ ಸಮಯದಲ್ಲಿ ಇವರ ಜೀವನೋಪಾಯಕ್ಕೆ ಯಾವುದೇ ಆರ್ಥಿಕ ಸಹಾಯ ಇಲ್ಲದೇ ಇರುವುದರಿಂದ ಇವರು ಸಂಕಷ್ಟದಲ್ಲಿದ್ದಾರೆ. ಆದಕಾರಣ ಕೂಡಲೇ ಅತಿಥಿ ಉಪನ್ಯಾಸಕರ/ಶಿಕ್ಷಕರ ಕುಟುಂಬಗಳಿಗೆ ಜೀವನೋಪಾಯಕ್ಕೆ ಬೇಕಾಗುವ ವಿಶೇಷ ಆರ್ಥಿಕ ಪ್ಯಾಕೇಜ್ ಮಂಜೂರಿ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ
ಈ ಸಂದರ್ಭದಲ್ಲಿ ಸಂಘದ ರಜನಿಕಾಂತ್ ಮಾಳೇದೆ , ರಫೀಕ್ ಮುಲ್ಲಾ , ರಮಾಕಾಂತ ಕೊಸಂದಲ , ಆನಂದ ಚಿರಕೋಡೆ ಇದ್ದರು .