RNI NO. KARKAN/2006/27779|Sunday, August 3, 2025
You are here: Home » breaking news » ಬೆಳಗಾವಿ:ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು

ಬೆಳಗಾವಿ:ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು 

ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ : ಬೆಳ್ಳಂಬೆಳಿಗ್ಗೆ ಹೈರಾಣಾದ ಪ್ರಯಾಣಿಕರು

ಬೆಳಗಾವಿ ಸೆ 16 : ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ರಸ್ತೆ ತಡೆದು ವಿದ್ಯಾರ್ಥಿಗಳ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ

ಕರಡಿಗುಡ್ಡಿಯಿಂದ ಬೆಳಗಾವಿ ಮಾರ್ಗವಾಗಿ ಸುಮಾರು ೮ ರಿಂದ ೯ ಗ್ರಾಮಗಳು ಬರುತ್ತವೆ ಈ ಎಲ್ಲ ಗ್ರಾಮದ ವಿದ್ಯಾರ್ಥಿಗಳು ದಿನನಿತ್ಯ ಶಾಲಾ ಕಾಲೇಜುಗಳಲ್ಲಿಗೆ ಹೊಗುಲು ಬಸ್ಸಗಳನ್ನೇ ಅವಲಂಭಿಸಿದ್ದಾರೆ ಆದರೆ ಈ ಮಾರ್ಗದಲ್ಲಿ ಬಸ್ಸುಗಳ ಓಡಾಟ ಕಡಿಮೆ ಇದೆ. ಪ್ರತಿದಿನ ಸರ್ಕಾರಿ ಬಸ್ಸುಗಳಲ್ಲಿ ಕುರಿ ತುಂಬಿದ ಹಾಗೆ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೊಗುತ್ತಿವೆ ಇದರಿಂದಾಗಿ ಕೆಲವೊಂದು ವಿದ್ಯಾರ್ಥಿಗಳು ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಅದರಲ್ಲೂ ಶನಿವಾರ ಬಂದ್ರೆ ಬಸ್ಸನಲ್ಲಿ ಪ್ರಯಾಣಿಸುವುದು ವಿದ್ಯಾರ್ಥಿಗಳಿಗೆ ಯುದ್ಧದಲ್ಲಿ ಗೆದ್ದಹಾಗೆ ಆಗುತ್ತದೆ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ವಿದ್ಯಾರ್ಥಿಗಳು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕುಲಂಕುಶವಾಗಿ ಆಲಿಸಿ ಸಮಸ್ಯೆ ಪರಿಹರಿಸುವುದರ ಜೋತೆಗೆ ಈ ಮಾರ್ಗವಾಗಿ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು

Related posts: