ಗೋಕಾಕ:ಸಾಮಾಜಿಕ ಸೇವೆಯಲ್ಲಿ ಇಂದಿನ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಸೋಮಶೇಖರ್ ಮಗದುಮ್ಮ
ಸಾಮಾಜಿಕ ಸೇವೆಯಲ್ಲಿ ಇಂದಿನ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಸೋಮಶೇಖರ್ ಮಗದುಮ್ಮ
ಗೋಕಾಕ ಅ 17: ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಇಂದಿನ ಯುವ ಜನಾಂಗ ತೊಡಗಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದು ರೋಟರಿ ರಕ್ತ ಬಾಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ ಹೇಳಿದರು.
ಇಲ್ಲಿಯ ಆಸ್ಥಾ ಚಾರಿಟೇಬಲ್ ಟ್ರಸ್ಟ್‍ನವರು ಸ್ವಾತಂತ್ರೋತ್ಸವ ಅಂಗವಾಗಿ ನಗರದ ಹೊರವಲಯದ ಜಿಕೆಎಲ್‍ಪಿ ಶಾಲಾ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ಪರಿಶುದ್ಧ ಹಾಗೂ ನಿಸ್ವಾರ್ಥ ಮನೋಭಾವದಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಈ ಸಂಸ್ಥೆಯ ಯುವ ಸದಸ್ಯರ ಕಾರ್ಯವನ್ನು ಅಭಿನಂದಿಸಿದ ಅವರು, ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಾ|| ಚಂದ್ರಶೇಖರ ಗೂಗವಾಡ, ಪ್ರವೀಣ ಟಕ್ಕಳಕಿ, ಲಕ್ಷ್ಮಣ ಪೂಜೇರಿ, ಕುಸಮಾ. ಡಿ.ಜಿ. ಟ್ರಸ್ಟಿನ್ ಅಧ್ಯಕ್ಷ ಮಹೇಶ ಮಗದುಮ್ಮ, ನವೀನ ಬೆಳಗಲಿ, ಪ್ರಮೀಳಾ ಜಕ್ಕನವರ, ಸೌಭಾಗ್ಯ ಮಗದುಮ್ಮ, ಆರತಿ ಗೂಗವಾಡ ಸೇರಿದಂತೆ ಟ್ರಸ್ಟಿನ ಸದಸ್ಯರು ಇದ್ದರು.