RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಕೊರೋನಾ ವೈರಸ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಅಮರನಾಥ್

ಗೋಕಾಕ:ಕೊರೋನಾ ವೈರಸ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಅಮರನಾಥ್ 

ಕೊರೋನಾ ವೈರಸ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಅಮರನಾಥ್

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಮೆ 1 :

 

 

 
ಕೊರೋನಾ ವೈರಸ ತಡೆಗಟ್ಟುವಲ್ಲಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಕೆಎಮ್ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಹೇಳಿದರು

ಶುಕ್ರವಾರದಂದು ನಗರದ ಡಿ.ಎಸ್.ಪಿ ಕಛೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದವರು ನೀಡಿದ ಆಹಾರದ ಕೀಟಗಳನ್ನು ವಿತರಿಸಿ ಮಾತನಾಡುತ್ತಾ ತಾಲೂಕಿನಲ್ಲಿ ಕೊರೋನಾ ವೈರಸ ಸೋಂಕಿತರು ಇಲ್ಲದಿರುವದು ನೆಮ್ಮದಿ ತಂದಿದೆ. ಮುಂಜಾಗ್ರತೆಗಾಗಿ ಎಲ್ಲರೂ ಸರಕಾರದ ನಿರ್ದೇಶನಗಳನ್ನು ಪಾಲಿಸಿ ಸರಕಾರದ ಸಿಬ್ಬಂದಿಗಳಿಗೆ ಸಹಕಾರ ನೀಡಿ ಕೊರೋನಾ ವೈರಸ ಹರಡದಂತೆ ತಡೆಯಲು ಶ್ರಮಿಸೋಣಾ ಎಂದು ಹೇಳಿದರು

ಈ ಸಂದರ್ಭದಲ್ಲಿ ಟಿ.ಆರ್‌.ಕಾಗಲ , ಮಡೆಪ್ಪ ತೋಳಿನವರ , ನಗರಸಭಾ ಸದಸ್ಯ ಎಸ್.ಎ ಕೊತವಾಲ, ಬಿಜೆಪಿ ಅಧ್ಯಕ್ಷ ಎಸ್.ವ್ಹಿ ದೆಮಶೆಟ್ಟಿ, ಭೀಮಗೌಡರ , ಸಿ.ಪಿ.ಐ ಗೋಪಾಲ ರಾಠೋಡ, ಪಿ.ಎಸ್.ಐ ಗುರುನಾಥ್ ಚವ್ಹಾಣ , ನಾಗರಾಜ ಕಿಲ್ಲಾರಿ, ಅಮ್ಮಿನಬಾಂವಿ , ವೈದ್ಯಾಧಿಕಾರಿ ರವೀಂದ್ರ ಅಂಟಿನ , ಡಾ.ಆರ್.ಎಸ್.ಬೆನ್ನಚಿನಮರಡಿ ಸೇರಿದಂತೆ ಅನೇಕರು ಇದ್ದರು

Related posts: