ಗೋಕಾಕ:ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ
ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ : ರಮೇಶ ಅಳಗುಂಡಿ
ಬೆಟಗೇರಿ ಜು 28 : ಇಂದಿನ ಯುಗದಲ್ಲಿ ಗುರು ಶಿಷ್ಯರ ನಡುವಿನ ಅವಿನಾಭಾವ ಸಂಬಂಧ ದಿನದಿಂದ ದಿನಕ್ಕೆ ಕುಂದುತ್ತಾ ಸಾಗಿದೆ. ಅಜ್ಞಾನದ ಅಂದಕಾರ ಕಳೆದು ಸುಜ್ಞಾನದ ಬೆಳಕಿನಡೆಯ ಸನ್ಮಾರ್ಗದತ್ತ ಕೊಂಡಯ್ಯುವ ಶಕ್ತಿ ಗುರುವಿನಲ್ಲಿ ಮಾತ್ರ ಇದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಹೇಳಿದರು.
ಗ್ರಾಮದ ವೀರಭದ್ರಪ್ಪ ವೀರಸಂಗಪ್ಪ ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯಲ್ಲ್ಲಿ ಗುರು ಪೂರ್ಣಿಮೆ ದಿನದ ಪ್ರಯುಕ್ತ ಶನಿವಾರ ಜುಲೈ.28 ರಂದು ನಡೆದ ಶಾಲೆಯ ಗುರು ವಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಷ್ಯರು ಗುರುವಿಗೆ ವಿದೇಯಕರಾಗಿ ನಡೆದುಕೊಳ್ಳಬೇಕು. ಗುರುವಿನಲ್ಲಿರುವ ಜ್ಞಾನದ ಗುರು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರಬೇಕು ಎಂದರು.
ಶಾಲೆಯ ಶಿಕ್ಷಕ ಮಂಜುನಾಥ ಹತ್ತಿ ಅವರು ಗುರು ಶಿಷ್ಯರ ನಡುವಿನ ಸಂಬಂಧ, ಜ್ಞಾನೋದಯದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಎಲ್ಲ ಶಿಕ್ಷಕರಿಗೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವುದರ ಮೂಲಕ ಗುರು ವಂದನೆ ಸಲ್ಲಿಸಿದ ಬಳಿಕ ಎಲ್ಲ ತರಗತಿಯ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ರಾಕೇಶ ನಡೋಣಿ, ಮೋಹನ ತುಪ್ಪದ, ಮಲ್ಲಿಕಾರ್ಜುನ ಹಿರೇಮಠ, ಎ.ಬಿ. ತಾಂವಶಿ, ವಿ.ಬಿ.ಬಿರಾಧಾರ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ರಮೇಶ ಬುದ್ನಿ, ಮಲ್ಹಾರಿ ಪೋಳ, ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗ, ಎಲ್ಲ ತರಗತಿಯ ವಿದ್ಯಾರ್ಥಿಗಳು, ಸ್ಥಳೀಯರು, ಇತರರು ಇದ್ದರು.