RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳು

ಘಟಪ್ರಭಾ:ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳು 

ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳು

ಘಟಪ್ರಭಾ ಅ 29 : ಸ್ಥಳೀಯ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿಧ್ಯಾಲಯದ ವಿದ್ಯಾರ್ಥಿಗಳು ಹಳ್ಳೂರಿನಲ್ಲಿ ನಡೆದ ಸನ್ 2018-19 ನೇ ಶೈಕ್ಷಣಿಕ ಸಾಲಿನ ಮೂಡಲಗಿ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಜಯಶಾಲಿಯಾಗಿದ್ದಾರೆ.
ಬಾಲಕ ಮತ್ತು ಬಾಲಕಿಯರ ಟೆನಿಕ್ವಾಯಟ್‍ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯಾದ ಮಲ್ಲಪ್ಪಾ ತಿಪ್ಪಾಣಗೊಳ ಕಬ್ಬಡ್ಡಿಯಲ್ಲಿ ತೋರಿಸಿದ ಪ್ರತಿಭೆಗೆ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗೆ ಇತನನ್ನು ಆಯ್ಕೆ ಮಾಡಿಲಾಯಿತು. ಸಂಸ್ಥೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಪ್ರೀತಿ ಕೌಜಲಗಿ ವೈಯಕ್ತಿಕ ಕ್ರೀಡೆಗಳಾದ ಉದ್ದಜಿಗಿತ, 400ಮೀಟರ ಓಟದಲ್ಲಿ ದ್ವೀತಿಯ ಸ್ಥಾನವನ್ನು ಮತ್ತು ಬಾಲಕಿಯರ (4×100) ರೀಲೆಯಲ್ಲಿ ದ್ವೀತಿಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರೆಲ್ಲರಿಗೂ “ನೀಡ್ಸ” ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಬಡಕುಂದ್ರಿ ಅವರು ಮತ್ತು ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ ಬಡಕುಂದ್ರಿ. ಸಂಸ್ಥೆಯ ಪ್ರಾಚಾರ್ಯ ಅಮೀರ ಮುಲ್ತಾನಿ ಹಾಗೂ ಎಲ್ಲ ಉಪನ್ಯಾಸಕ ಬೋದಕ ಮತ್ತು ಭೋದಕೇತರ ಸಿಬ್ಬಂದಿ ವೃಂದ ಹಾಗೂ ಶ್ರೀಮತಿ ಅಕ್ಕುತಾಯಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ. ಶೈಕ್ಷಣಿಕ ಮತ್ತು ಕ್ರೀಡಾ ಜೀವನದಲ್ಲಿ ಇದೆ ರೀತಿ ಯಶಸ್ಸು ದೂರೆಯಲೆಂದು ಹಾರೃಸಿದ್ದಾರೆ.

Related posts: