RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ

ಗೋಕಾಕ:ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ 

ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಉಪಹಾರ ವಿತರಣೆ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 6 :

ಕೊರೋನಾ ವೈರಸ್ ಭೀತಿಯಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನಲೆಯಲ್ಲಿ ಕಳೆದ 12  ದಿನಗಳಿಂದ ಇಲ್ಲಿಯ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ.3 (ಕೆ.ಬಿ.ಎಸ್.ನಂ.3) ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ ಪೋಲೀಸ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಗೂ ಅಸಹಾಯಕರಿಗೆ ಊಟ, ಉಪಹಾರ, ಮಜ್ಜಿಗೆ ಹಾಗೂ ಶುದ್ಧ ಕುಡಿಯುವ ನೀರು ಸೇರಿದಂತೆ ವಸ್ತುಗಳನ್ನು ಪೂರೈಸುವ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ .
ಪ್ರತಿದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಂಡು ಅದರಲ್ಲಿ ಉಪಹಾರ-ಊಟವನ್ನು ತಯಾರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಇರುವ ಸ್ಥಳಗಳಿಗೆ ಹೋಗಿ  ವಿತರಿಸುತ್ತಿದ್ದಾರೆ. ಸೋಮವಾರದಂದು ಕೂಡಾ ನಗರದ ವಿವಿದೆಡೆ ಸಂಚರಿಸಿ ತಮ್ಮ ಕಾಯಕವನ್ನು ಮುಂದುವರೆಸಿದ್ದಾರೆ.
ಕೆಬಿಎಸ್ ನಂ.3 ಶಾಲೆಯ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದಲ್ಲಿ ಸಂತೋಷ ಖಂಡ್ರಿ, ಸತೀಶ ಬನ್ನಿಶೆಟ್ಟಿ,  ಜೀತು ಮಾಂಗಳೆ ,ಮಸ್ತಾನ ಬಾಗವಾನ, ಶಿವಪುತ್ರ ಶಿಂಗಳಾಪೂರ , ಶ್ರೀಶೈಲ ಯಕ್ಕೂಂಡಿ ಸೇರಿದಂತೆ ಇತರರು ಇದ್ದರು .

Related posts:

ಗೋಕಾಕ:ಪ್ರೇಯಸಿಯನ್ನು ಕಿಡ್ನಾಪ ಮಾಡಲು ಯತ್ನ ಪ್ರೀಯತಮ ಸೇರಿ ನಾಲ್ವರಿಗೆ ಗೂಸಾ : ಗೋಕಾಕ ತಾಲೂಕಿನ ಅರಳಿಮಟ್ಟಿ ಬಳಿ ಘಟನೆ

ಗೋಕಾಕ: ರಾಯಬಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಹಾಲು ಸಂಸ್ಕರಣ ಘಟಕ ನಿರ್ಮಾಣ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹ…

ಗೋಕಾಕ:ದಿ. ಬಿ.ಆರ್.ಅರಿಶಿಣಗೋಡಿ ಹಾಗೂ ದೀ. ಬಸವಣ್ಯಪ್ಪ ಹೋಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ…