ಗೋಕಾಕ:ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ

ಲೋಕೋಪಯೋಗಿ ಇಲಾಖೆ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಚಾಲನೆ
ಗೋಕಾಕ ಫೆ 10 : ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ನಗರದ ಬಸವೇಶ್ವರ ವೃತ್ತದಿಂದ ಸಸ್ಯೋಧ್ಯಾನದವರೆಗೆ 95 ಲಕ್ಷ ರೂ ಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಹಾಗೂ ಗಟ್ಟಿಬಸಣ್ಣ ಗುಡಿಯಿಂದ ಯೋಗ್ಯಿಕೊಳ್ಳ ಗುಡಿವರೆಗೆ 2.95 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ಥಿಕರಣ ಕಾಮಗಾರಿಗೆ ಶನಿವಾರದಂದು ಯುವ ನಾಯಕ ಅಮರನಾಥ ಜಾರಕಿಹೊಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರುಗಳಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ನಗರಸಭೆ ಮಾಜಿ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮಾಜಿ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಮುಖಂಡರುಗಳಾದ ಶಿವು ಪಾಟೀಲ್ ,ಭೀಮಗೌಡ ಪೊಲೀಸ್ ಗೌಡರ, ಗುತ್ತಿಗೆದಾರರಾದ ರಾಜು ದರಗಶೆಟ್ಟಿ, ಬಿ.ಬಿ.ದಾಸನವರ, ಲೋಕೋಪಯೋಗಿ ಇಲಾಖೆಯ ಎಇಇ ಅನಿಲಕುಮಾರ ಶಿಂಗೆ, ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.