ಘಟಪ್ರಭಾ:ದೂರದ ಊರುಗಳಿಂದ ಯಾರೇ ಬಂದರೂ ನಮಗೇ ಮಾಹಿತಿ ನೀಡಿ : ಪಿಎಸ್ ಐ ಹಾಲಪ್ಪ ಬಾಲದಂಡಿ
ದೂರದ ಊರುಗಳಿಂದ ಯಾರೇ ಬಂದರೂ ನಮಗೇ ಮಾಹಿತಿ ನೀಡಿ : ಪಿಎಸ್ ಐ ಹಾಲಪ್ಪ ಬಾಲದಂಡಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 5 :
ದೂರದ ಊರುಗಳಿಂದ ಯಾರೇ ಬಂದರೂ ನಮಗೇ ಮಾಹಿತಿ ನೀಡಿ ಎಂದು ಘಟಪ್ರಭಾ ಪಿಎಸ್‍ಆಯ್ ಹಾಲಪ್ಪ ಬಾಲದಂಡಿ ಹೇಳಿದರು.
ಅವರು ಶನಿವಾರ ಸಂಜೆ ಪೋಲಿಸ ಠಾಣೆಯಲ್ಲಿ ಕರೆಯಲಾದ ಮುಸ್ಲಿಂ ಸಮಾಜದ ಸಭೆಯಲ್ಲಿ ಮಾತನಾಡುತ್ತಿದ್ದರು. ಇಲ್ಲಿ ಯಾವ ಜಾತಿ ಭೇದವಿಲ್ಲ ಯಾರೇ ಹೊರಗಿನಿಂದ ಬಂದರೆ ಅಂಥವರ ಮಾಹಿತಿ ನೀಡಿದ್ದಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿ ನಂತರ ಮನೆಗೆ ಕಳಿಸಿಕೊಡಲಾಗುವದು ಇದರಿಂದ ಅವರ ಮನೆಯವರಿಗೆ ಹಾಗೂ ಇತರರಿಗೆ ರೋಗದ ಸೊಂಕು ತಗಲುವ ಬೀತಿ ಇರುವದಿಲ್ಲ ಎಂದರು. ಜಮಾತದಲ್ಲಿ ಯಾರು ಹೊರಗೆ ಹೋಗುತ್ತಾರೆ ಹಾಗೂ ಯಾರು ಬರುತ್ತಾರೆ ಎನ್ನುವದು ತಮಗೆ ಮಾತ್ರ ಗೊತ್ತಿರುತ್ತದೆ ಅಂತಹ ವಿಷಯ ತಿಳಿಸಿದ್ದಲ್ಲಿ ಹೇಳಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವದು. ಎಲ್ಲ ಬಾಂದವರು ಕೂಡಿ ಸಹಕಾರದಿಂದ ಈ ಮಹಾ ಮಾರಿಯನ್ನು ಎದರಿಸೋಣ ಎಂದರು.
ಸಭೆಯಲ್ಲಿ ಗ್ರಾಮದ ಹಿರಿಯರಾದ ಡಿ.ಎಮ್. ದಳವಾಯಿ, ಗ್ರಾ. ಪಂ. ಅಧ್ಯಕ್ಷ ಎಸ್.ಐ ಬೆನವಾಡಿ, ಸುರೇಶ ಪಾಟೀಲ. ಜಿ.ಎಸ್. ರಜಪೂತ, ಮುಸ್ಲಿಂ ಸಮಾಜದ ಮುತುವಲ್ಲಿ ನೂರುದ್ದಿನ ಪೀರಜಾದೆ, ಶಬ್ಬೀರ ಜಮಖಂಡಿ, ಮಲೀಕ ಬಾಗವಾನ, ರಜಾಕ ಚೌದರಿ, ಇಮಾಮಹುಸೇನ ಮುಲ್ಲಾ, ಸಲೀಮ ಕಬ್ಬೂರ ಸೇರಿದಂತೆ ಅನೇಕರು ಇದ್ದರು.