RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ:ಮೂಡಲಗಿ 4ದಿನಗಳ ಕಾಲ ಸಂಪೂರ್ಣ ಸ್ಥಬ್ದ: ಸಾರ್ವಜನಿಕರಿಂದಲೇ ಸ್ವಯಂಪ್ರೇರಿತ ದಿಗ್ಬಂಧನ

ಮೂಡಲಗಿ:ಮೂಡಲಗಿ 4ದಿನಗಳ ಕಾಲ ಸಂಪೂರ್ಣ ಸ್ಥಬ್ದ: ಸಾರ್ವಜನಿಕರಿಂದಲೇ ಸ್ವಯಂಪ್ರೇರಿತ ದಿಗ್ಬಂಧನ 

ಮೂಡಲಗಿ 4ದಿನಗಳ ಕಾಲ ಸಂಪೂರ್ಣ ಸ್ಥಬ್ದ: ಸಾರ್ವಜನಿಕರಿಂದಲೇ ಸ್ವಯಂಪ್ರೇರಿತ ದಿಗ್ಬಂಧನ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಎ 4 :

 

 
ಬೆಳಗಾವಿ ಜಿಲ್ಲೆಯಲ್ಲಿ ಮೂರು ಜನರಿಗೆ ಕರೋನ ವೈರಸ್ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಪಟ್ಟಣದ ಜನರಲ್ಲಿ ಆತಂಕ ಹೆಚ್ಚಿಸಿದ್ದು ಪಟ್ಟಣದ ವಿವಿಧ ಬಡಾವಣೆಯ ಸಂಪರ್ಕ ರಸ್ತೆಯನ್ನು ಸಾರ್ವಜನಿಕರೇ ಬಂದ್ ಮಾಡಿಕೊಂಡು ಸ್ವಯಂಪ್ರೇರಿತವಾಗಿ ದಿಗ್ಬಂಧನ ಮಾಡಿ ಹೊರಗಿನಿಂದ ಬರುವವರು ಹಾಗೂ ಇಲ್ಲಿರುವವರು ಹೊರ ಹೋಗದಂತೆ ರಸ್ತೆಗಳಿಗೆ ಬೇಲಿ ಹಾಕಿ ಮನೆಯಲ್ಲಿಯೇ ಕುಳಿತಿದ್ದಾರೆ. ಅದಲ್ಲದೇ ನಿನ್ನೆ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆಯ ನಂತರ ತಾಲೂಕ ದಂಡಧಿಕಾರಿ ಡಿ.ಜೆ ಮಾಹತ ಹಾಗೂ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಅವರ ಆದೇಶದಂತೆ 4 ದಿನ ಕಟ್ಟುನಿಟ್ಟಾಗಿ ಯಾರು ಮನೆಯಿಂದ ಹೊರಗೆ ಬರಬಾರದು ಮತ್ತು ಅನವಶ್ಯಕವಾಗಿ ದ್ವಿಚಕ್ರಗಳಲ್ಲಿ ಸಂಚಾರಿಸಬಾರದೆಂಬ ಎಚ್ಚರಿಕೆಯ ಸಂದೇಶಕ್ಕೆ ಭಯಭೀತರಾಗಿ ಯಾರು ಮನೆಯಿಂದ ಹೊರಗಡೆ ಬರದೇ ಮನೆಯಲ್ಲಿ ಲಾಕ್‍ಡೌನ್ ಹಾಗಿದ್ದು ವಿಷೇಶವಾಗಿತ್ತು. ಮುಂಜಾನೆ 10ಗಂಟೆಯಿಂದ ವಾಹನ ಸಂಚಾರವು ಸಂಪೂರ್ಣ ಬಂದ್ ಆಗಿದ್ದವು. ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ರಸ್ತೆಗಳನ್ನು ಮುಚ್ಚಿದರಿಂದ ಪಟ್ಟಣಕ್ಕೆ ಬರುವ ಜನರು ಈ ಕಡೆಗೆ ಮುಖ ಮಾಡಲಿಲ್ಲ ಅಂತು ನಾಲ್ಕು ದಿನ ಮೂಡಲಗಿ ಪಟ್ಟಣದಲ್ಲಿ ಪುಲ್ ಹೈ ಅಲರ್ಟ್ ಆಗುವುದರಲ್ಲಿ ಸಂದೇಹವಿಲ್ಲ.
ಪೋಲಿಸ್ ಇಲಾಖೆಯ ಪಥ ಸಂಚಲನ: ಜಿಲ್ಲೆಯಲ್ಲಿ ಕರೋನ ವೈರಸ್ ಪಾಸಿಟಿವ್ ಪತ್ತೆಯಾಗಿರುವುದರಿಂದ ಪೋಲಿಸ್ ಇಲಾಖೆಯೂ ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಿದೆ. ಮೂಡಲಗಿ ಠಾಣೆಯ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ನೇತೃತ್ವದಲ್ಲಿ ಪೋಲಿಸರು ಬಿಗಿ ಬಂದೋಬಸ್ತು ಕೈಗೊಂಡಿದ್ದಾರೆ. ಪಟ್ಟಣದಲ್ಲಿ ನಾಲ್ಕು ದಿನ ಕಟ್ಟೆಚ್ಚರವಹಿಸಿದ ಹಿನ್ನಲೆಯಲ್ಲಿ ಶನಿವಾರ ವಿಜಯಪೂರದ ಇಂಡಿಯನ್ ರಿಸರ್ವ್ ಬೆಟಲಿಯನ್(ಐಆರ್‍ಬಿ) ಆಗಮಿಸಿದ್ದು ಪಟ್ಟಣದ ವಿದ್ಯಾನಗರ, ಜಾತಾಗಾರ ಓಣಿ, ಕಲ್ಮೇಶ್ವರ ಸರ್ಕಲ್, ಸಂಗಪ್ಪ ಸರ್ಕಲ್ ರಾಜೀವ್‍ಗಾಂಧಿ ನಗರ, ಗಾಂಧಿ ಚೌಕ್, ಕರೆಮ್ಮ ಸರ್ಕಲ್, ಚೆನ್ನಮ್ಮ ವೃತ್ತಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಪೋಲಿಸ್ ಠಾಣೆಯ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ವಿಜಯಪೂರ ಐಆರ್‍ಬಿ ತುಕಡಿಯ ಎಎಸ್‍ಐಗಳಾದ ಎ.ವಿರಶೆಟ್ಟಿ, ಪಿ.ಬಿ. ಮಸಗುಪ್ಪಿ, ಬಿ.ಎಸ್ ಇಮಗೌಡನವರ, ಕರುನಾಡು ಸೈನಿಕ ತರಭೇತಿ ಕೇಂದ್ರದ ಶಂಕರ ತುಕ್ಕನ್ನವರ ಮತ್ತು ಪೋಲಿಸ್ ಸಿಬ್ಬಂದಿ, ಕರುನಾಡು ಸೈನಿಕ ತರಭೇತಿ ಕೇಂದ್ರದ ಶಿಭಿರಾರ್ಥಿಗಳು ಇದ್ದರು.

Related posts: