ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸಲು ಲೋಳಸೂರ ಗ್ರಾಮದಲ್ಲಿ ಜಾಗೃತಿ ಜಾಥಾ
ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸಲು ಲೋಳಸೂರ ಗ್ರಾಮದಲ್ಲಿ ಜಾಗೃತಿ ಜಾಥಾ
ಗೋಕಾಕ :: ಕಾವೇರಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದ ಎಲ್ಲ ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸುವಂತೆ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯದ್ಯಂತ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ.
ಇಂದು ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ” ನಿರುಪಯುಕ್ತ ಕೊಳವೆ ಭಾಂವಿ ಮುಚ್ಚಿಸಿ – ಕಂದಮ್ಮಗಳ ಜೀವ ರಕ್ಷಿಸಿ” ಎಂಬ ಘೋಷಣೆಯೊಂದಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಜಾಗೃತಿ ಜಾಥಾ ನಡೆಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನೋಡಲ್ ಅಧಿಕಾರಿ ಹಾಗೂ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿಸುವುದು ಪ್ರತಿಯೊಬ್ಬರ ಕರ್ತವ್ಯ ಅಧಿಕಾರಿಗಳು ಮಾಡುವ ಕೆಲಸಕ್ಕೆ ಸಾರ್ವಜನಿಕರು ಸಹಕಾರ ನೀಡಿಬೇಕೆಂದು ಮನವಿ ಮಾಡಿದರು.
ಗ್ರಾಮದ ಬೀದಿಗಳಲ್ಲಿ ಸಂಚರಿಸಿದ ಜಾಥಾ ನಿರುಪಯುಕ್ತ ಕೊಳವೆ ಭಾಂವಿಗಳನ್ನು ಮುಚ್ಚಿ ಅನಾಹುತ ಜರುಗದಂತೆ ತಡೆಯಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸಿದ್ದವ್ವ ನಿಡಗುಂದಿ ,ಪಿಡಿಓ ಪಿ.ವೈ.ಬಾರ್ಕಿ, ಗ್ರಾಮ ಲೆಕ್ಕಾಧಿಕಾರಿ ಎಸ್.ಎನ್.ಹಿರೇಮಠ, ಕೃಷಿ ಇಲಾಖೆಯ ಬಿ.ಎಸ್.ಕೊಳದೂರ,ಹೆಸ್ಕಾಂ ಮಾರ್ಗದಾಳು ಶರಣಗೌಡ ಬಿರಾದಾರ, ಸೇರಿದಂತೆ ಇತರರು ಇದ್ದರು.
