ಬೆಳಗಾವಿ:ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 27 :
ರಾಯಚೂರಿನ ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ನ್ಯಾಯ ದೊರಕಿಸಿ , ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟಗಾರರ ಸಮೀತಿ ಹಾಗೂ ಶ್ರೀ ಕಾಳಿಕಾದೇವಿ ಮಹಿಳಾ ಮಂಡಳದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು
ಶನಿವಾರದಂದು ಮುಂಜಾನೆ ನಗರದ ಚನ್ನಮ್ಮಾ ವೃತ್ತದಲ್ಲಿ ಸೇರಿದ ವಿಶ್ವಕರ್ಮ ಸಮಾಜ ಬಾಂಧವರು ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವೌ ಅರ್ಪಿಸಿ , ಆದಷ್ಟು ಬೇಗ ಮಧು ಪತ್ತಾರ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತುಕಾನಟ್ಟಿ ಗಾಯತ್ರಿ ಪೀಠದ ಶಾಂತಾನಂದ ಭಾರತಿ ಮಹಾಸ್ವಾಮಿಗಳು , ಶ್ರೀಮತಿ ಗಾಯತ್ರಿ ಚಂದ್ರಶೇಖರ , ಸುರೇಶ ರಂಗಪ್ಪ ಪತ್ತಾರ , ಕು.ಗೀತಾ ಬಡಿಗೇರ , ಸಿದ್ದು ಬಡಿಗೇರ , ಶಿವರಾಜ ಬಡಿಗೇರ , ಕಾಳಪ್ಪ ಪತ್ತಾರ , ಉಮೇಶ ಬಡಿಗೇರ , ಶ್ರೀಮತಿ ಲತಾ ದೇಶನೂರ , ಶ್ರೀಮತಿ ವೈಶಾಲಿ ಸುತಾರ , ಶ್ರೀಮತಿ ಕರುಣಾ ಸಾವಗಾಂವ, ಸುವರ್ಣಾ ಬಟ್ಟಲಿ , ಆರ್.ಎಂ.ಸಾಲಿ , ನಂದಾ ದೇಶಸೂರಕರ , ಲೀಲಾವತಿ ಪತ್ತಾರ ,ಮಂಜುಳಾ ಪೋತದಾರ , ಸುಧಾ ಪೋತದಾರ ,ಅನುಸೂಯಾ ಚಂಚವಾಡಕರ , ಸಾವಿತ್ರಿ ಕಮ್ಮಾರ ಸೇರಿದಂತೆ ಅನೇಕರು ಇದ್ದರು
ಇದೇ ಸಂದರ್ಭದಲ್ಲಿ ಕು . ಮಧು ಪತ್ತಾರ ಅವಳ ಆತ್ಮಶಾಂತಿಗಾಗಿ ಮೌನಾಚರಣೆ ಆಚರಿಸಲಾಯಿತು