RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ :ಹಸಿರು ಗೋಕಾಕಗಾಗಿ ಕೈ ಜೋಡಿಸಿದ ಜೆ.ಸಿ.ಐ ಮತ್ತು ಪಾಪ್ಯೂಲರ ಫ್ರಂಟ್ ಸಂಘಟನೆಗಳು

ಗೋಕಾಕ :ಹಸಿರು ಗೋಕಾಕಗಾಗಿ ಕೈ ಜೋಡಿಸಿದ ಜೆ.ಸಿ.ಐ ಮತ್ತು ಪಾಪ್ಯೂಲರ ಫ್ರಂಟ್ ಸಂಘಟನೆಗಳು 

ಹಸಿರು ಗೋಕಾಕಗಾಗಿ ಕೈ ಜೋಡಿಸಿದ ಜೆ.ಸಿ.ಐ ಮತ್ತು ಪಾಪ್ಯೂಲರ ಫ್ರಂಟ್ ಸಂಘಟನೆಗಳು

ಗೋಕಾಕ ಅ 13: ಕರ್ನಾಟಕ ರಕ್ಷಣಾ ವೇದಿಕೆ,ಮಠಾಧೀಶರ ವೇದಿಕೆ ಆಶ್ರಯದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮತ್ತು ವಿವಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಗೋಕಾಕಗಾಗಿ ಒಂದು ದಿನ ನಿಮಿತ್ಯ ಏಕ ಕಾಲಕ್ಕೆ ಸುಮಾರು 25 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತ ಪಡಿಸಿ ಜೆ.ಸಿ.ಐ ಹಾಗೂ ಪಾಪ್ಯೂಲರ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನೇತೃತ್ವದಲ್ಲಿ ಗೋಕಾಕ ನಗರದ ಮುಸ್ಲಿಂ ಸಮುದಾಯದ ಸ್ಮಶಾನದಲ್ಲಿ ಮುಂಜಾನೆ ಸರಿಯಾಗಿ 11 ಗಂಟೆಗೆ ಏಕಕಾಲಕ್ಕೆ ಸುಮಾರು 200 ಸಸಿಗಳನ್ನು ನೆಡಲಾಯಿತು

ಸಂದರ್ಭದಲ್ಲಿ ಜೆ.ಸಿ.ಐ ಅದ್ಯಕ್ಷರು ವಿಷ್ಣು ಲಾತೂರ ಸಂಸ್ಥೆಯ ಸದಸ್ಯರುಗಳಾದ ಭೀಮಸೇನ ಜುಲಾಪೂರೆ, ಗುರುರಾಜ ನಿಡೂನಿ, ಕೆಂಪಣ್ಣಾ ಚಿಂಚಲಿ, ರವಿ ಮಾಲದಿನ್ನಿ, ದನ್ಯಕುಮಾರ ಕಿತ್ತೂರ, ಪಾಪ್ಯೂಲರ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಅಧ್ಯಕ್ಷರಾದ ಆಸೀಫ್ ಫನೀಭಂದ, ಮೈನುದ್ದೀನ ಪೀರಜಾದೆ, ದಾದಾಪಿರ ಇಮಾರತವಾಲೆ, ಶಾನೂಲ ಸೌದಾಗರ, ಮಲಿಕ ಪೈಲವಾನ, ಅಬ್ಬಾಸ ದೇಸಾಯಿ ಶಿಕ್ಷಕರಾದ ಎಲ್.ಕೆ.ತೋರಣಗಟ್ಟಿ, ಬಿ.ಎಸ್.ಕೊಳವಿ, ಶಾಲಾ ವಿಧ್ಯಾರ್ಥಿಗಳು ಭಾಗವಹಿಸಿ ಸಸಿ ನೆಟ್ಟು ಸಂಭ್ರಮಿಸಿದರು.

Related posts: