ಬೆಟಗೇರಿ:ಬಯಲು ಬಹಿರ್ದೆಸೆ ಮಾಡದೇ, ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳಬೇಕು : ಈಶ್ವರ ಬಳಿಗಾರ
ಬಯಲು ಬಹಿರ್ದೆಸೆ ಮಾಡದೇ, ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳಬೇಕು : ಈಶ್ವರ ಬಳಿಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 13 :
ಗ್ರಾಮದ ವಿವಿಧಡೆವಿರುವ ಸಾರ್ವಜನಿಕ ಮಹಿಳಾ ಶೌಚಗೃಹಗಳನ್ನು ನವೀಕರಣಗೊಳಿಸಿ ಸ್ಥಳೀಯ ಮಹಿಳೆಯರ ಬಹಿರ್ದಸೆ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದರು.
ಗ್ರಾಮದ ಗ್ರಾಪಂ ಕಾರ್ಯಾಲಯ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಹತ್ತಿರವಿರುವ ಸಾರ್ವಜನಿಕ ಮಹಿಳೆಯರ ಶೌಚಗೃಹಗಳ ನವೀಕರಣ ಕಾರ್ಯ ಪೂರ್ಣಗೊಳಿಸಿ ಸ್ಥಳೀಯ ಮಹಿಳೆಯರು ಶೌಚಾಲಯ ಬಳಕೆಗೆ ಸೂಚನೆ ನೀಡಿ ಮಾತನಾಡಿದರು.
ಸ್ಥಳೀಯ ಕೆಲವಡೆ ಸಾರ್ವಜನಿಕ ಶೌಚಗೃಹಗಳು ಸರಿಯಾದ ನಿರ್ವಹಣೆ ಸೌಲಭ್ಯಗಳ ಕೊರತೆಯಿಂದ ಕೆಲವು ವರ್ಷಗಳಿಂದ ನಿರುಪಯೋಕ್ತವಾಗಿ ನಿಂತಿರುವದನ್ನು ಪರಿಗಣಿಸಿ, ಗ್ರಾಪಂ ಮೇಲಾಧಿಕಾರಿಗಳ ಮತ್ತು ಇಲ್ಲಿಯ ಗ್ರಾಪಂ ಸದಸ್ಯರ ಹಾಗೂ ಹಿರಿಯ ನಾಗರಿಕರ ಸಹಕಾರದಿಂದ ಗ್ರಾಪಂ ಅನುದಾನದಡಿಯಲ್ಲಿ ಈಗ ಕೆಲವಡೆ ಶೌಚಗೃಹಗಳಿಗೆ ವಿದ್ಯುತ್ ದೀಪ, ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳೀಯ ಮಹಿಳೆಯರು, ಮಕ್ಕಳು, ಗ್ರಾಮದ ಪ್ರಮುಖ ರಸ್ತೆ ಬದಿಯಲ್ಲಿ ಬಯಲು ಬಹಿರ್ದೆಸೆ ಮಾಡದೇ, ಶೌಚಾಲಯಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದರು.
ಸ್ಥಳೀಯರ ಶ್ಲಾಘನೆ: ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಿಕ, ಗ್ರಾಮದ ಹಿರಿಯ ನಾಗರಿಕರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಪಿಡಿಒ ಎಚ್.ಎನ್.ಭಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹಾಗೂ ಗ್ರಾಪಂ ಸದಸ್ಯರ, ಸಿಬ್ಬಂದಿಯವರ ಕ್ರೀಯಾಶೀಲ ಪಾರದರ್ಶಕ ಆಡಳಿತದÀಲ್ಲ್ಲಿ ಗ್ರಾಮದ ನಾಗರಿಕರ ಹಲವಾರು ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸುತ್ತಿರುವ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿ, ಮಾದರಿ ಗ್ರಾಮವನ್ನಾಗಿಸುವಲ್ಲಿ ಪ್ರಯತ್ನಿಸುತ್ತಿರುವ ಗ್ರಾಪಂದವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.
ಇಲ್ಲಿಯ ಸಾರ್ವಜನಿಕ ಮಹಿಳಾ ಶೌಚಾಲಯಗಳಲ್ಲಿ ಮಹಿಳೆಯರು ಸ್ವಚ್ಛತೆ ನೋಡಿಕೊಳ್ಳಬೇಕು, ಶೌಚಗೃಹಗಳಲ್ಲಿ ಅವಶ್ಯಕ ನೀರಿನ ಸೌಲಭ್ಯ ಒದಗಿಸಲಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದು ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಮನವಿ ಮಾಡಿಕೊಂಡಿದ್ದಾರೆ.
ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ, ಕಾರ್ಯದರ್ಶಿ ಪರಶುರಾಮ ಇಟಗೌಡ್ರ, ಕರವಸೂಲಿಗಾರ ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಾನಂದ ಐದುಡ್ಡಿ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ಥಳೀಯರು ಇದ್ದರು.