ಬೆಳಗಾವಿ:ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು
ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು
ಬೆಳಗಾವಿ ಜು 4 : ಮನೆಗಳಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಿ ಚಿನ್ನಭರಣ ಎರಗಿಸುತ್ತಿದ್ದ ಮನೆಗಳ್ಳರನ್ನು ಬುಧವಾರ ಬಂಧಿಸಿರುವ ಕ್ಯಾಂಪ ಪೊಲೀಸರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ
ಬೆಳಗಾವಿಯ ಕೋತ್ವಾಲ್ ಗಲ್ಲಿಯ ನಿವಾಸಿ ನಜೀಂ ಮುಲ್ಲಾ ಬಂಧಿತ ಆರೋಪಿ. ಬಂಧಿತನಿಂದ 4.50 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೀಲಿ ಮುರಿದು ಈತ ಒಳ ನುಗ್ಗಿ ಕಳ್ಳತನ ಮಾಡುತ್ತಿದ್ದ. ಇದೀಗ ಕ್ಯಾಂಪ್ ಠಾಣೆಗೆ ಸೇರಿದ ಮಹಾನಗರದ ಇತರ ಠಾಣೆಗಳ ವ್ಯಾಪ್ತಿಯಲ್ಲೂ ಕಳ್ಳತನ ಮಾಡಿರುವುದಾಗಿ ನಜೀಂ ಒಪ್ಪಿಕೊಂಡಿದ್ದಾನೆ.
