RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಚುನಾವಣೆಗೆ ಅವಿರೋಧ ಆಯ್ಕೆ

ಗೋಕಾಕ:ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಚುನಾವಣೆಗೆ ಅವಿರೋಧ ಆಯ್ಕೆ 

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಚುನಾವಣೆಗೆ ಅವಿರೋಧ ಆಯ್ಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಫೆ 12 :

 

ತೀವೃ ಜಿದ್ದಾ-ಜಿದ್ದಿನಿಂದ ಕೂಡಿದ ಸಮೀಪದ ಧರ್ಮಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಚುನಾವಣೆ ಕೊನೆಗೂ ಅವಿರೋಧ ಆಯ್ಕೆ ನಡೆದಿದೆ.
ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಕೊರಕಪೂಜೇರಿ, ಉಪಾಧ್ಯಕ್ಷರಾಗಿ ಶ್ರೀಮತಿ ಸಿದ್ದವ್ವ ಗುಡೆನ್ನವರ ಅವರು ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಸಂತೋಷ ಹೆಗಡೆ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿಠ್ಠಲ ಪೂಜೇರಿ, ಕಲ್ಲಪ್ಪ ತಿಗಡಿ, ನಿಂಗಪ್ಪ ಹಾರುಗೊಪ್ಪ, ಸುರೇಶ ಪೂಜೇರಿ, ಪುಂಡಲೀಕ ಪೂಜೇರಿ, ಸರಸ್ವತಿ ಕಬ್ಬೂರ, ಲಕ್ಕಪ್ಪ ತಳಗಡೆ, ಮಹಾದೇವ ಬಡ್ಡಿ, ಕಲ್ಲೋಳೆಪ್ಪ ಗೋರಬಾಳ, ಗ್ರಾಮದ ಹಿರಿಯರಾದ ಭೀಮಪ್ಪ ಪೂಜೇರಿ, ಲಗಮಣ್ಣ ಕುಟ್ರಿ, ಪರಶುರಾಮ ಸನದಿ, ಬಸಪ್ಪ ಮನ್ನಿಕೇರಿ, ಲಕ್ಕಪ್ಪ ಕೊರಕಪೂಜೇರಿ, ನಾಗಪ್ಪ ಬಾಪುಕರಿ, ಲಗಮಣ್ಣ ಲೋಕುರಿ, ಅಶೋಕ ಗುಂಡ್ಯಾಗೋಳ, ಬನಪ್ಪ ಕೊರಕಪೂಜೇರಿ, ಪುಂಡಲೀಕ ಕಬ್ಬೂರ, ಮಡ್ಡೆಪ್ಪ ಕೊರಕಪೂಜೇರಿ, ಶ್ರೀಕಾಂತ ದೇಸಾಯಿ ಸೇರಿದಂತೆ ಅನೇಕರು ಇದ್ದರು.

Related posts: